ನಚ್ಚಬೆಟ್ಟು ದಾರುಲ್ ಮುಸ್ತಫಾದಲ್ಲಿ ಮುಖ್ತಸರ್ ಸನದ್ ಕೋರ್ಸ್ ಆರಂಭ

Update: 2019-04-23 15:02 GMT

ಉಪ್ಪಿನಂಗಡಿ,ಎ.23: ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಸಮುಚ್ಛಯವಾದ ನಚ್ಚಬೆಟ್ಟುವಿನ ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿಯಲ್ಲಿ ರಮಳಾನ್ ಬಳಿಕ ಧಾರ್ಮಿಕ ಮುಖ್ತಸರ್ ಸನದ್ ಕೋರ್ಸ್ ಆರಂಭವಾಗಲಿದೆ.

ಒಂದು ವರ್ಷದ ಈ ಕೋರ್ಸಿನಲ್ಲಿ ಶಾಫಿಈ ಕರ್ಮಶಾಸ್ತ್ರ ಗ್ರಂಥವಾದ ತುಹ್ಫತುಲ್ ಮುಹ್ತಾಜ್, ಹದೀಸ್ ಗ್ರಂಥಗಳು, ಖಗೋಳ ಶಾಸ್ತ್ರ, ತರ್ಕಶಾಸ್ತ್ರ, ತಜ್ ವೀದ್, ಉಸೂಲುಲ್ ಹದೀಸ್, ಉಸೂಲುಲ್ ಫಿಖ್ಹ್, ತಫ್ಸೀರ್ ಇತ್ಯಾದಿ ವಿಷಯಗಳು ಒಳಗೊಂಡಿದೆ. ತೋಕೆ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ಅವರ ನೇತೃತ್ವದಲ್ಲಿ ನಡೆಯುವ ಈ ಅಧ್ಯಯನ ಕೋರ್ಸ್ ನಲ್ಲಿ ಪರಿಣತ ವಿದ್ವಾಂಸರು ತರಗತಿ ನಡೆಸಲಿದ್ದಾರೆ. ಇದರ ದಾಖಲಾತಿ ಈಗಾಗಲೇ ಆರಂಭಗೊಂಡಿದೆ. ಮೇ 1, 2 ರಂದು ನೇರ ಸಂದರ್ಶನ ನಡೆಯಲಿದ್ದು, ಮಾಹಿತಿಗಾಗಿ 7022621043 ಸಂಖ್ಯೆ ಸಂಪರ್ಕಿಸಲು ಎಂದು ಪ್ರಕಟನೆಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News