ಶಿಲೆಕಲ್ಲು ಗಣಿಗಾರಿಕೆಯಲ್ಲಿ ಸ್ಪೋಟ: ಕಾರ್ಮಿಕ ಮೃತ್ಯು

Update: 2019-04-23 16:26 GMT

ಹೆಬ್ರಿ, ಎ. 23: ಶಿಲೆಕಲ್ಲು ಸ್ಪೋಟಿಸುವ ಸಂದರ್ಭ ಸ್ಪೋಟಕ ಸ್ಪೋಟ ಗೊಂಡು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಎ.22ರಂದು ಸಂಜೆ 6 ಗಂಟೆ ಸುಮಾರಿಗೆ ನಾಲ್ಕೂರು ಗ್ರಾಮದ ಮುದ್ರಬೈಲು ಎಂಬಲ್ಲಿ ನಡೆದಿದೆ.

ಮೃತರನ್ನು ನಾಲ್ಕೂರು ಗ್ರಾಮದ ಕಜ್ಕೆ ಬಾವಿಜಡ್ಡು ನಿವಾಸಿ ಪುರುಷ ನಾಯ್ಕ (45) ಎಂದು ಗುರುತಿಸಲಾಗಿದೆ. ಇವರು ಮುದ್ರಬೈಲ್ಲು ಎಂಬಲ್ಲಿರುವ ಬಾಬು ದೇವಣ್ಣ ನಾಯ್ಕ್ ಎಂಬವರ ಕುಮ್ಕಿ ಸರಕಾರಿ ಜಾಗದಲ್ಲಿ ಶಿಲೆ ಕಲ್ಲುಗಳನ್ನು ತೆಗೆದು ಮಾರಾಟ ಮಾಡುತ್ತಿದ್ದು, ಈ ಸಂಬಂಧ ಗುಳಿಗಳಿಗೆ ಸ್ಪೋಟಕ ಮದ್ದನ್ನು ಇಟ್ಟು ಸ್ಫೋಟಿಸುವ ವೇಳೆ ಸ್ಪೋಟಕವು ಸ್ಪೋಟಗೊಂಡ ಪರಿಣಾಮ ಪುರುಷ ನಾಯ್ಕ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದುಬಂದಿದೆ.

ಪುರುಷ ನಾಯ್ಕಗೆ ಸ್ಪೋಟಕ ಮದ್ದನ್ನು ಬಳಸಿ ಸ್ಪೋಟಿಸುವ ಯಾವುದೇ ಪರವಾನಿಗೆ ಇಲ್ಲದಿದ್ದರೂ ಸ್ಪೋಟಕ ಮದ್ದನ್ನು ನೀಡಿದ ಕುಂದಾಪುರದ ಏಕನಾಥ ಬೋಳಾರ್ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಮೃತರ ಮಗ ಕಿರಣ ನಾಯ್ಕ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News