ಅತ್ತಾವರ: ವೃದ್ಧೆ ನಾಪತ್ತೆ

Update: 2019-04-23 16:38 GMT

ಮಂಗಳೂರು, ಎ. 23: ನಗರದ ಅತ್ತಾವರದಲ್ಲಿ ವಾಸವಾಗಿದ್ದ ಕಮಲಾ (80) ಎಂಬವರು ಎ. 20ರಿಂದ ನಾಪತ್ತೆಯಾದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಮಲಾ ತನ್ನ ಮಗಳ ಜತೆ ವಾಸವಾಗಿದ್ದರು. ಕಮಲಾರ ಮೊಮ್ಮಗ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನನ್ನು ನೋಡಲು ಎ.20ರಂದು ಮಧ್ಯಾಹ್ನ 1:45ಕ್ಕೆ ಆಸ್ಪತ್ರೆಗೆ ಹೋಗಿ ಅಲ್ಲಿಂದ ವಾಪಸ್ ಮನೆಗೆ ತೆರಳಿದ್ದರು. ಬಳಿಕ ತಾಸುಗಳ ನಂತರ ದೂರುದಾರರ ಮಗಳ ಗಂಡ ದೂರವಾಣಿ ಕರೆ ಮಾಡಿ ಕಮಲಾ ಸಂಜೆ 6 ಗಂಟೆಗೆ ಮಂಗಳೂರು ಕೇಂದ್ರ ರೈಲು ನಿಲ್ದಾಣದ 2ನೇ ಫ್ಲಾಟ್ ಫಾರಂಗೆ ಹೋಗುವ ಇಂಟರ್‌ಲಾಕ್ ರಸ್ತೆಯಲ್ಲಿ ಎರಡು ಬ್ಯಾಕ್ ಸಮೇತ ನಡೆದುಕೊಂಡು ಹೋಗುತ್ತಿದ್ದುದಾಗಿ ತನಗೆ ಮನೆಯ ಮಾಲಕರು ತಿಳಿಸುವುದಾಗಿ ಹೇಳಿದ್ದರು. ಕೂಡಲೇ ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಹುಡುಕಾಡಿದ್ದು ಅವರು ಪತ್ತೆಯಾಗಿರುವುದಿಲ್ಲ. ಕಮಲಾರಿಗೆ ನೆನೆಪಿನ ಶಕ್ತಿ ಕಡಿಮೆ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಾಪತ್ತೆಯಾದ ದಿನ ಕಮಲಾ ಹಳದಿ ಬಣ್ಣದ ಸೀರೆ ಮತ್ತು ರವಿಕೆ ಧರಿಸಿದ್ದು ಕೈಯಲ್ಲಿ ನೀಲಿ ಬಣ್ಣದ ಬ್ಯಾಗ್ ಹಾಗೂ ಬಿಳಿ ಬಣ್ಣದ ಚೀಲ ನಮೂನೆಯ ಬ್ಯಾಗ್ ಹಿಡಿದುಕೊಂಡು ಹೋಗಿರುತ್ತಾರೆ. ಇವರನ್ನು ಕಂಡವರು ಮಾಹಿತಿ ನೀಡುವಂತೆ ಪಾಂಡೇಶ್ವರ ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News