ಬಿಯರ್ ಬಾಟಲಿಯಲ್ಲಿ ಬ್ಲೇಡ್ ಪತ್ತೆ: ದೂರು

Update: 2019-04-23 16:59 GMT

ಮಂಗಳೂರು, ಎ.23: ನಗರದ ಬಿಜೈಯ ವೈನ್‌ಗೇಟ್ ಎಂಬ ಹೆಸರಿನ ಮದ್ಯದ ಅಂಗಡಿಯಲ್ಲಿ ಖರೀದಿಸಿದ ಬಿಯರ್ ಬಾಟಲಿಯಲ್ಲಿ ಬ್ಲೇಡೊಂದು ಪತ್ತೆಯಾದ ಬಗ್ಗೆ ಅಬಕಾರಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ.

ಕಾವೂರು ಗಾಂಧಿನಗರದ ಶರತ್ ಕುಮಾರ್ ಎಂಬವರು ಸೋಮವಾರ ರಾತ್ರಿ 8 ಗಂಟೆಗೆ ಬಿಜೈಯ ವೈನ್‌ಗೇಟ್‌ನಲ್ಲಿ ‘ಟುಬೋರ್ಗ್’ ಬ್ರಾಂಡ್‌ನ ನಾಲ್ಕು ಬಾಟಲಿ ಬಿಯರ್ ಖರೀದಿಸಿ ಮನೆಗೆ ಕೊಂಡೊಯ್ದಿದ್ದರು. ಆ ಪೈಕಿ ಒಂದು ಬಾಟಲಿಯಲ್ಲಿದ್ದ ಬಿಯರನ್ನು ಭಾಗಶಃ ಕುಡಿದ ಬಳಿಕ ಅದರ ತಳದಲ್ಲಿ ಬ್ಲೇಡೊಂದು ಪತ್ತೆಯಾಗಿದ್ದು, ತಕ್ಷಣ ಮದ್ಯದ ಅಂಗಡಿಗೆ ತೆರಳಿ ವಿಷಯ ತಿಳಿಸಿದಾಗ ಅವರು ಸರಿಯಾಗಿ ಸ್ಪಂದಿಸದೆ ಇನ್ನೊಂದು ಬಾಟಲಿ ಬಿಯರ್ ಕೊಡಲು ಮುಂದಾದರು ಎನ್ನಲಾಗಿದೆ.

ಈ ಬಗ್ಗೆ ದೂರು ನೀಡಿರುವ ಶರತ್ ಕುಮಾರ್ ಸೂಕ್ತ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News