ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ: ಮಿಲಾಗ್ರಿಸ್ ಮೈದಾನದಲ್ಲಿ ಪ್ರಾರ್ಥನೆ

Update: 2019-04-23 17:02 GMT

ಮಂಗಳೂರು, ಎ.23: ರವಿವಾರ ಮುಂಜಾನೆ ಶ್ರೀಲಂಕಾದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಮಡಿದವರಿಗೆ ನಗರದ ಮಿಲಾಗ್ರಿಸ್ ಮೈದಾನದಲ್ಲಿ ಮಂಗಳವಾರ ಸಂಜೆ ಪ್ರಾರ್ಥನೆ ಸಲ್ಲಿಸಲಾಯಿತು.

ಧರ್ಮಪ್ರಾಂತದ ವಿಕಾರ್ ಜನರಲ್ ಮೊನ್ಸಿಂಜೊರ್ ಮ್ಯಾಕ್ಷಿಮ್ ನೊರೊನ್ಹಾ ಬಾಂಬ್ ಸ್ಫೋಟದಲ್ಲಿ ಮಡಿದ ಜನರ ಆತ್ಮಗಳಿಗೆ ಶಾಂತಿ ಕೋರಿದರು ಮತ್ತು ಗಾಯಾಳುಗಳಿಗೆ ಸಾಂತ್ವನ ನುಡಿದರು.

ಬಾಂಬ್ ಸ್ಫೋಟದಲ್ಲಿ ಜನರು ಮಡಿದರೂ ದೇವರಲ್ಲಿ ಜೀವಿಸುತ್ತಾರೆ. ಏಸು ಸ್ವಾಮಿಯ ಪುನರುತ್ಥಾನದ ಹಬ್ಬವು ಯೇಸು ಸ್ವಾಮಿ ಮರಣದ ಮೇಲೆ ಜಯ ಸಾಧಿಸಿದ ಹಬ್ಬವಾಗಿದೆ. ಈ ಹಬ್ಬದ ಆಚರಣೆ ಮಾಡಲು ಬಂದ ಜನರು ಯೇಸು ಸ್ವಾಮಿಯಲ್ಲಿ ನಂಬಿಕೆ ಉಳ್ಳವರಾಗಿದ್ದರು. ಹಾಗಾಗಿ ಅವರ ನಂಬಿಕೆಯಿಂದ ದೇವರಲ್ಲಿ ಜೀವಿಸುತ್ತಾರೆ ಎಂದು ಮೊನ್ಸಿಂಜೊರ್ ಮ್ಯಾಕ್ಷಿಮ್ ನೊರೊನ್ಹಾ ಹೇಳಿದರು.

ಪ್ರಾರ್ಥನಾ ಕೂಟದಲ್ಲಿ ಸೇರಿದ ಜನರೆಲ್ಲರೂ ಬೆಳಗುವ ಮೊಂಬತ್ತಿಯನ್ನು ಹಿಡಿದು ಮೌನ ಪ್ರಾರ್ಥನೆ ಸಲ್ಲಿಸಿದರು. ಫಾ.ಜೆ.ಬಿ. ಕ್ರಾಸ್ತ ಮಡಿದವರಿಗೆ ಮತ್ತು ಗಾಯಾಳುಗಳಿಗೆ ಪ್ರಾರ್ಥನೆ ಸಲ್ಲಿಸಿದರು.

ಮಿಲಾಗ್ರಿಸ್ ದೇವಾಲಯದ ಧರ್ಮಗುರು ಫಾ. ವಲೇರಿಯನ್ ಡಿಸೋಜ ಮತ್ತಿತರ ಧರ್ಮಗುರುಗಳು, ಧರ್ಮಭಗಿನಿಯರು ಮತ್ತು ಭಕ್ತಾಧಿಗಳು ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡರು. ಧರ್ಮಪ್ರಾಂತದ ಪಾಲನಾ ಮಂಡಳಿಯ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಎಂ.ಪಿ. ನೊರೊನ್ಹಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News