ಲೋಕಸಭಾ ಚುನಾವಣೆ: ಕಾಸರಗೋಡು ಕ್ಷೇತ್ರದಲ್ಲಿ 80.57 ಶೇ. ಮತದಾನ

Update: 2019-04-24 04:24 GMT

ಕಾಸರಗೋಡು, ಎ.24: ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಕ್ಷೇತ್ರದಲ್ಲಿ ಒಟ್ಟು 80.57 ಶೇ. ಮತದಾನವಾಗಿದ್ದು, 13,60,827 ಮತದಾರ ಪೈಕಿ 10,90,421 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. 

ರಾತ್ರಿ  ಒಂಬತ್ತರ ತನಕ ಕೆಲ ಮತಗಟ್ಟೆಗಳಲ್ಲೂ ಮತದಾನ ಮುಂದುವರಿದಿತ್ತು.

 ಸಂಜೆ 6 ಗಂಟೆಗೆ ಸಮಯಾವಕಾಶ ನೀಡಿದ್ದರೂ ಕಾಲ ಮತಗಟ್ಟೆಗಳಲ್ಲಿ ನೂರಾರು ಮತದಾರರು ಸರದಿ ಸಾಲಲ್ಲಿ ಕಂಡು ಬಂದರು. ಕೆಲವೆಡೆ ಮತಯಂತ್ರ ದೋಷ ಹಾಗೂ ಇನ್ನಿತ್ತರ ಕಾರಣಗಳಿಂದ ಮತದಾನ ನಿಧಾನ ಗತಿಯಲ್ಲಿ ಸಾಗಿದ್ದರಿಂದ ಮತದಾನ ರಾತ್ರಿ ತನಕ ಸಾಗಿತು. 

ಮತದಾನದಲ್ಲಿ ಶೇಕಡಾವಾರು ಫಲಿತಾಂಶದಲ್ಲಿ ಮಹಿಳೆಯರು ಮುಂದಿದ್ದಾರೆ. 2014ರ ಮತ ಚಲಾವಣೆಯ ಪ್ರಮಾಣವನ್ನು ಅವಲೋಕನ ನಡೆಸಿದಾಗ ಈ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದ ಬಾರಿ 78.49 ಶೇ. ಮತದಾನವಾಗಿತ್ತು. 1,317 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. 

ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಮತದಾನದ ಪ್ರಮಾಣದಲ್ಲಿ ಇಳಿಕೆಯಾಗಿದೆ. ಸಿಪಿಎಂ ಭದ್ರಕೋಟೆಗಳಲ್ಲಿ ಶೇ.80ಕ್ಕಿಂತ ಅಧಿಕ ಮತದಾನವಾಗಿದೆ.

ಮತ ಎಣಿಕೆ ಮೇ 23ರಂದು ನಡೆಯಲಿದ್ದು, ರಾಜಕೀಯ ಪಕ್ಷಗಳು ಸೋಲು - ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿವೆ.

ಮತದಾನದ ವಿವರ

ಮಂಜೇಶ್ವರ - 74.94 ಶೇ.

ಕಾಸರಗೋಡು - 76.12 ಶೇ.

ಉದುಮ -   78.03 ಶೇ.

ಕಾಞ0ಗಾಡ್  -  81.20 ಶೇ.

ತ್ರಿಕ್ಕರಿಪುರ - 83.34 ಶೇ.

ಪಯ್ಯನ್ನೂರು - 85.82 ಶೇ.

ಕಲ್ಯಾಶ್ಯೇರಿ  - 82.72 ಶೇ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News