ಮೇ 1: ‘ರಮಝಾನಿನ ಮೂಲಕ ರಯ್ಶಾನ್ ಗೆ’ ಜಿಲ್ಲಾ ಮಟ್ಟದ ರಮಝಾನ್ ಅಭಿಯಾನಗೆ ಚಾಲನೆ

Update: 2019-04-24 06:11 GMT

ಮಂಗಳೂರು, ಎ.24: ಎಸ್ಕೆಎಸ್ಸೆಸ್ಸೆಫ್ ‘ರಮಝಾನಿನ ಮೂಲಕ ರಯ್ಶಾನಿಗೆ’ ಎಂಬ ಶೀರ್ಷಿಕೆಯಡಿಯಲ್ಲಿ ಹಮ್ಮಿಕೊಂಡಿರುವ  ರಮಝಾನ್ ಕ್ಶಾಂಪೈನ್ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭ ಮೇ 1ರಂದು ಮಗ್ರಿಬ್ ನಮಾಝ್ ಬಳಿಕ ಧೂಮಲಿಕೆಯಲ್ಲಿ ನಡೆಯಲಿದೆ.

ಸೈಯದ್ ಅಮೀರ್ ತಂಙಳ್ ಕಿನ್ಶ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಸ್ವದಕತುಲ್ಲಾ ಫೈಝಿ ಉದ್ಘಾಟಿಸುವರು. ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಶಕ್ಷ ಖಾಸಿಂ ದಾರಿಮಿ ಮುಖ್ಯ ಭಾಷಣ ಮಾಡುವರು. ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ವಲಯ ನೇತಾರರು ಭಾಗವಹಿಸಲ್ಲಿದ್ದಾರೆ.

ಅಭಿಯಾನದ ಭಾಗವಾಗಿ ವಲಯ, ಕ್ಲಸ್ಟರ್, ಶಾಖಾ ಮಟ್ಟದಲ್ಲಿ, ಸಹಚಾರಿ ರಿಲೀಫ್  ಸೆಲ್ ಕಲೆಕ್ಷನ್, ಅಧ್ಯಯನ ಶಿಬಿರ, ಕ್ವಿಝ್ ಸ್ಪರ್ಧೆ, ಇಫ್ತಾರ್ ಸಂಗಮ, ರಮಝಾನ್ ಪ್ರವಚನ, ಸೌಹಾರ್ದ ಸಂಗಮ, ಬದ್ರ್ ಸಂದೇಶ ಮುಂತಾದ ಕಾರ್ಯಕ್ರಮವು ನಡೆಯಲಿದೆ.

ಕುವೈತ್ ಇಸ್ಲಾಮಿಕ್ ಕೌನ್ಸಿಲ್ ಸಹಯೋಗದಲ್ಲಿ ರಮಝಾನ್ ಕಿಟ್ ವಿತರಣೆ ಕೂಡ ನಡೆಯಲಿದೆ.

ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಕಛೇರಿಯಲ್ಲಿ ಇತ್ತೀಚೆಗೆ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಶಕ್ಷ ಖಾಸಿಂ ದಾರಿಮಿ ಕಿನ್ಶ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ತಾಜುದ್ದೀನ್ ರಹ್ಮಾನಿ ಪುತ್ತೂರು, ಹನೀಫ್ ಧೂಮಲಿಕೆ, ಕಾರ್ಯದರ್ಶಿ ಮುಹಮ್ಮದ್ ಕುಂಞಿ ಮಾಸ್ಟರ್ ಕೈಕಂಬ, ಜಿಲ್ಲಾ ಸಂಚಾಲಕ ಝಕರಿಯ ಮರ್ಧಾಳ, ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾದ ಆರಿಫ್ ಬಡಕಬೈಲ್, ಹಕೀಂ ಪರ್ತಿಪ್ಪಾಡಿ  ಮುಂತಾದವರು ಭಾಗವಹಿಸಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News