ಶೇ. 50 ವಿವಿ ಪ್ಯಾಟ್-ಇವಿಎಂ ತಾಳೆ ಹಾಕಿ: 21 ಪಕ್ಷಗಳಿಂದ ಸುಪ್ರೀಂಗೆ ಪುನರ್ ಪರಿಶೀಲನಾ ಅರ್ಜಿ

Update: 2019-04-24 15:35 GMT

ಹೊಸದಿಲ್ಲಿ, ಎ. 24: ಶೇ. 50ರಷ್ಟು ವಿವಿ ಪ್ಯಾಟ್ ಹಾಗೂ ಇವಿಎಂಗಳನ್ನು ತಾಳೆ ಹಾಕಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ 20 ರಾಜಕೀಯ ಪಕ್ಷಗಳು ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿವೆ.

ಈ ಬಾರಿಯ ಲೋಕಸಭಾ ಹಾಗೂ ವಿಧಾನ ಸಭಾ ಚುನಾವಣೆಯಲ್ಲಿ ಪ್ರತಿ ವಿಧಾನ ಸಭೆಯ ಒಂದು ಮತಗಟ್ಟೆಯಲ್ಲಿ 5 ವಿವಿ

ಪ್ಯಾಟ್ ಹಾಗೂ ಇವಿಎಂಗಳನ್ನು ತಾಳೆ ಮಾಡಬೇಕು ಎಂದು ಈ ತಿಂಗಳ ಆರಂಭದಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತ್ತು. ಶೇ. 50 ವಿವಿ ಪ್ಯಾಟ್ ಹಾಗೂ ಇವಿಎಂಗಳನ್ನು ತಾಳೆ ಮಾಡುವುದಿದ್ದರೆ, ಲೆಕ್ಕ ಹಾಕಬೇಕಾದ ಸಮಯ ಸುಮಾರು 6 ದಿನಗಳ ವರೆಗೆ ಹೆಚ್ಚುತ್ತದೆ ಎಂದು ಚುನಾವಣಾ ಆಯೋಗ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠಕ್ಕೆ ಅಫಿದಾವಿತ್ ಸಲ್ಲಿಸಿದೆ.

ಹೆಚ್ಚು ವಿವಿ ಪ್ಯಾಟ್‌ಗಳ ಸ್ಲಿಪ್ ಲೆಕ್ಕ ಹಾಕಲು ವಿಶೇಷ ತರಬೇತಿಯ ಅಗತ್ಯತೆ ಇದೆ. ಈ ವಿಷಯದಲ್ಲಿ ಅಧಿಕಾರಿಗಳ ಸಾಮರ್ಥ್ಯ ವೃದ್ಧಿಸಬೇಕು ಹಾಗೂ ಅವರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಬೇಕು ಎಂದು ಕೂಡ ಚುನಾವಣಾ ಆಯೋಗ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News