ಅಮೆರಿಕ ಸೇನೆ ಭಯೋತ್ಪಾದಕ ಸಂಘಟನೆ: ಇರಾನ್ ಸಂಸತ್ ಘೋಷಣೆ

Update: 2019-04-24 17:38 GMT

ಟೆಹರಾನ್, ಎ. 24: ಅಮೆರಿಕದ ಸೇನೆಯನ್ನು ಭಯೋತ್ಪಾದಕ ಸಂಘಟನೆ ಎಂಬುದಾಗಿ ಘೋಷಿಸುವ ನಿರ್ಣಯದ ಪರವಾಗಿ ಇರಾನ್ ಸಂಸದರು ಮಂಗಳವಾರ ಮತ ಹಾಕಿದ್ದಾರೆ ಎಂದು ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇರಾನ್ ತೈಲ ಖರೀದಿಯನ್ನು ಮುಂದುವರಿಸಿದರೆ, ಯಾವ ದೇಶವೂ ಅಮೆರಿಕದ ಆರ್ಥಿಕ ದಿಗ್ಬಂಧನಗಳಿಂದ ತಪ್ಪಿಸಿಕೊಳ್ಳುವುದಿಲ್ಲ ಎಂಬುದಾಗಿ ಘೋಷಿಸುವ ಮೂಲಕ ಅಮೆರಿಕ ಇರಾನ್ ಮೇಲಿನ ಒತ್ತಡವನ್ನು ಹೆಚ್ಚಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.

ಒಂದು ವಾರ ಮೊದಲು, ಇರಾನ್ ಸಂಸದರು ಪಶ್ಚಿಮ ಏಶ್ಯದಲ್ಲಿರುವ ಅಮೆರಿಕದ ಸೈನಿಕರನ್ನು ಭಯೋತ್ಪಾದಕರು ಹಾಗೂ ಅಮೆರಿಕವನ್ನು ‘ಭಯೋತ್ಪಾದಕರಿಗೆ ಬೆಂಬಲ ನೀಡುವ ದೇಶ’ ಎಂಬುದಾಗಿ ಕರೆದಿರುವುದನ್ನು ಸ್ಮರಿಸಬಹುದಾಗಿದೆ.

ಇರಾನ್‌ನ ಸೇನೆ ‘ರೆವಲೂಶನರಿ ಗಾರ್ಡ್ಸ್ ಕಾರ್ಪ್ಸ್’ನ್ನು ಕಪ್ಪು ಪಟ್ಟಿಗೆ ಸೇರಿಸುವ ಅಮೆರಿಕದ ನಿರ್ಧಾರಕ್ಕೆ ಪ್ರತಿಯಾಗಿ ಇರಾನ್ ಸಂಸದರು ಆ ಘೋಷಣೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News