ಮೇ 19ರ ಬಳಿಕ ಮೋದಿ ಜೀವನಚರಿತ್ರೆ ಸಿನೆಮ ಬಿಡುಗಡೆಯಾಗಲಿ: ಸುಪ್ರೀಂಗೆ ಇಸಿ ಶಿಫಾರಸು

Update: 2019-04-24 17:53 GMT

ಹೊಸದಿಲ್ಲಿ, ಎ.24: ಪ್ರಧಾನಿ ನರೇಂದ್ರ ಮೋದಿ ಜೀವನಚರಿತ್ರೆ ಆಧಾರಿತ ಸಿನೆಮವನ್ನು ಅಂತಿಮ ಹಂತದ ಮತದಾನದ ಬಳಿಕ ಬಿಡುಗಡೆ ಮಾಡಬೇಕು ಎಂದು ಚುನಾವಣಾ ಆಯೋಗವು ಸುಪ್ರೀಂಕೋರ್ಟ್‌ಗೆ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಮೇ 19ರಂದು ನಡೆಯಲಿದೆ. ಸುಪ್ರೀಂಕೋರ್ಟ್‌ನ ಸೂಚನೆಯ ಮೇರೆಗೆ ಸಿನೆಮ ವೀಕ್ಷಿಸಿದ ಚುನಾವಣಾ ಆಯೋಗದ ಅಧಿಕಾರಿಗಳು, ಈ ಸಿನೆಮ ಬಿಡುಗಡೆಯಾದರೆ ಒಂದು ರಾಜಕೀಯ ಪಕ್ಷಕ್ಕೆ ಚುನಾವಣೆಯಲ್ಲಿ ಹೆಚ್ಚಿನ ಅನುಕೂಲ ದೊರಕುವ ಸಾಧ್ಯತೆ ಹೆಚ್ಚಿದೆ. ನರೇಂದ್ರ ಮೋದಿಯವರ ಪಾತ್ರವನ್ನು ಜನಪ್ರಿಯಗೊಳಿಸುವ ಮತ್ತು ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳದ ನಾಯಕನೆಂದು ಬಿಂಬಿಸುವ ರೀತಿಯಲ್ಲಿ ಸಿನೆಮದ ಕತೆಯಿದೆ . ಒಂದೇ ಆಯಾಮವಿರುವ ಕತೆಯ ಸಿನೆಮವಿದು ಎಂದು ಅಭಿಪ್ರಾಯಪಟ್ಟರು. ಈ ಅಭಿಪ್ರಾಯವನ್ನು ಚುನಾವಣಾ ಆಯೋಗದ ವಕೀಲರು ಸೀಲ್ ಮಾಡಿದ ಲಕೋಟೆಯಲ್ಲಿಟ್ಟು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದರು.

ಆಯೋಗದ ವರದಿಯ ಬಗ್ಗೆ ಸುಪ್ರೀಂಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿ ನಿರ್ಧಾರ ಪ್ರಕಟಿಸಲಿದೆ. ವರದಿಯ ವಿವರವನ್ನು ಸಿನೆಮದ ನಿರ್ಮಾಪಕರೊಂದಿಗೂ ಹಂಚಿಕೊಳ್ಳುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News