ಫೈನಲ್‌ಗೆ ಅರ್ಹತೆ ಗಳಿಸಲು ಮನು, ಹೀನಾ ವಿಫಲ

Update: 2019-04-24 18:03 GMT

ಬೀಜಿಂಗ್, ಎ.24: ಭಾರತದ ಯುವ ಶೂಟಿಂಗ್ ತಾರೆ ಮನು ಭಾಕರ್ ಹಾಗೂ ಅನುಭವಿ ಸ್ಪರ್ಧಿ ಹೀನಾ ಸಿಧು ಬುಧವಾರ ಐಎಸ್‌ಎಸ್‌ಎಫ್ ವಿಶ್ವಕಪ್‌ನ 10 ಮೀ. ಏರ್ ಪಿಸ್ತೂಲ್ ವಿಭಾಗದ ಫೈನಲ್‌ಗೆ ಅರ್ಹತೆ ಗಳಿಸಲು ವಿಫಲರಾದರು. ಅರ್ಹತಾ ಸುತ್ತಿನಲ್ಲಿ ಮನು 575 ಅಂಕ ಗಳಿಸಿ 17ನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ಹೀನಾ 572 ಅಂಕ ಗಳಿಸಿ 26ನೇ ಸ್ಥಾನಕ್ಕೆ ಜಾರಿದರು. ಈ ವಿಭಾಗದ ಫೈನಲ್ಸ್‌ನಲ್ಲಿ ಕೊರಿಯದ ಕಿಮ್ ಮಿನ್‌ಜುಂಗ್ 245 ಅಂಕಗಳಿಗೆ ಗುರಿಯಿಟ್ಟು ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡರು. ಇನ್ನು ಪುರುಷರ 3ಪಿ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಭಾರತದ ಚೈನ್ ಸಿಂಗ್ 1165 ಅಂಕ ಗಳಿಸಿ 27ನೇ ಸ್ಥಾನ ಪಡೆದರೆ, ಪಾರುಲ್ ಕುಮಾರ್ 1164 ಅಂಕಗಳಿಗೆ ಗುರಿಯಿಟ್ಟು 33ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಹಿರಿಯ ಸ್ಪರ್ಧಿ ಸಂಜೀವ್ ರಾಜ್‌ಪೂತ್ 1145 ಅಂಕ ಗಳಿಸಿ 58ನೇ ಸ್ಥಾನ ಪಡೆದರು. ಝೆಕ್ ಗಣರಾಜ್ಯದ ಪ್ರತಿಭಾವಂತ ಶೂಟರ್ ಫಿಲಿಪ್ ನೆಪೆಜ್‌ಚಾಲ್ ಅವರು ರಶ್ಯದ ಸೆರ್ಜೆ ಕಮೆನ್‌ಸ್ಕಿ ಅವರನ್ನು ಮಣಿಸುವ ಮೂಲಕ ಪುರುಷರ 50 ಮೀ. ರೈಫಲ್ 3 ಪೋಸಿಶನ್ಸ್ (3ಪಿ) ವಿಭಾಗದ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News