ಮೋದಿ ವಿರುದ್ಧ ನೀಡಿದ ದೂರು ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ ನಾಪತ್ತೆ ?

Update: 2019-04-24 18:21 GMT

ಹೊಸದಿಲ್ಲಿ, ಎ. 23: ಮಹಾರಾಷ್ಟ್ರದ ಲಾತೂರಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ದೂರು ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ ನಾಪತ್ತೆಯಾಗಿದೆ ಎಂದು ndtv.com ವರದಿ ಮಾಡಿದೆ

 ಪ್ರಧಾನಿ ನರೇಂದ್ರ ಮೋದಿ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಎಪ್ರಿಲ್ 9ರಂದು ಸಲ್ಲಿಸಲಾದ ದೂರು ಮಾತ್ರ ವೆಬ್‌ಸೈಟ್‌ನ ಪಟ್ಟಿಯಿಂದ ನಾಪತ್ತೆಯಾಗಿದೆ. ಕೋಲ್ಕತ್ತಾ ಮೂಲದ ಮಹೇಂದ್ರ ಸಿಂಗ್ ಈ ದೂರು ದಾಖಲಿಸಿದ್ದರು. ಮಹಾರಾಷ್ಟ್ರದ ಲಾತೂರಿನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತವನ್ನು ಪುಲ್ವಾಮಾ ಹುತಾತ್ಮರಿಗೆ ಹಾಗೂ ಬಾಲಕೋಟ್‌ನಲ್ಲಿ ದಾಳಿ ನಡೆಸಿದ ಯೋಧರಿಗೆ ಅರ್ಪಿಸುವಂತೆ ಮತದಾರರಲ್ಲಿ ಆಗ್ರಹಿಸಿದ್ದರು.

ಎರಡು ದಿನಗಳ ಬಳಿಕ ಭಾಷಣದ ಲಿಪ್ಯಂತರದೊಂದಿಗೆ ವರದಿ ಸಲ್ಲಿಸುವಂತೆ ಚುನಾವಣಾ ಆಯೋಗ ಮಹಾರಾಷ್ಟ್ರ ಮುಖ್ಯ ಚುನಾವಣಾ ಅಧಿಕಾರಿಗೆ ನಿರ್ದೇಶಿಸಿತ್ತು. ದೂರಿನ ಪ್ರಗತಿಯನ್ನು ಸಾರ್ವಜನಿಕರಿಗೆ ಪರಿಶೀಲಿಸಲು ಅನುಕೂಲವಾಗುವಂತೆ ‘ಸೌಲಭ್ಯ’ ಬಳಸಿ ತಾನು ದೂರು ದಾಖಲಿಸಿದ್ದೇನೆ.

ಆದರೆ, ಸ್ಟೇಟಸ್ ‘ಪರಿಹರಿಸಲಾಗಿದೆ’ ಎಂದು ಪ್ರದರ್ಶಿಸುತ್ತಿದೆ ಎಂದು ಮಹೇಂದ್ರ ಸಿಂಗ್ ಹೇಳಿದ್ದಾರೆ. ಆದಾಗ್ಯೂ, ದೂರನ್ನು ಪರಿಹರಿಸಿಲ್ಲ. ತಾಂತ್ರಿಕ ತೊಂದರೆಯಿಂದ ಅಸಮರ್ಪಕ ಸ್ಟೇಟಸ್ ತೋರಿಸುತ್ತಿದೆ ಎಂದು ಹಿರಿಯ ಚುನಾವಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News