×
Ad

ಸಿಜೆಐ ವಿರುದ್ಧ 'ಷಡ್ಯಂತ್ರ' ಆರೋಪ : ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಸುಪ್ರೀಂ ಆದೇಶ

Update: 2019-04-25 16:22 IST
ರಂಜನ್ ಗೊಗೊಯಿ 

ಹೊಸದಿಲ್ಲಿ :  ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳನ್ನು ಹೊರಿಸಿ ಅವರ ಗೌರವಕ್ಕೆ ಚ್ಯುತಿ ತರಲು ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಎಂದು ವಕೀಲ ಉತ್ಸವ್ ಸಿಂಗ್ ಬೈನ್ಸ್ ಅವರು ಆರೋಪಿಸಿದ್ದು, ಈ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಆದರೆ ಜಸ್ಟಿಸ್ ಪಟ್ನಾಯಕ್ ಅವರು ಮುಖ್ಯ ನ್ಯಾಯಮೂರ್ತಿಗಳ ವಿರುದ್ಧದ ಆರೋಪದ ಬಗ್ಗೆ ತನಿಖೆ ನಡೆಸುವುದಿಲ್ಲ, ಇದನ್ನು  ಆಂತರಿಕ ಸಮಿತಿ ತನಿಖೆ ನಡೆಸುವುದೆಂದು ಸುಪ್ರೀಂ ಕೋರ್ಟ್ ಸ್ಪಷ್ಟ ಪಡಿಸಿದೆ.

ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದ ಬೆನ್ನಿಗೇ  ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದ ತನಿಖೆ ನಡೆಸಲು ರಚಿಸಲಾಗಿರುವ ತ್ರಿಸದಸ್ಯ ಆಂತರಿಕ ಸಮಿತಿಯಿಂದ ಜಸ್ಟಿಸ್ ಎನ್ ವಿ ರಮಣ ಹೊರ ಬಂದಿದ್ದಾರೆ. ಈ ನಿರ್ದಿಷ್ಟ ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವಂತೆ  ಮನವಿ ಮಾಡಿ ದೂರುದಾರ ಬುಧವಾರ ಸಮಿತಿಗೆ ಪತ್ರ ಬರೆದಿದ್ದರು.

ಜಸ್ಟಿಸ್ ಪಟ್ನಾಯಕ್ ಅವರಿಗೆ ಅಗತ್ಯವಿದ್ದಾಗಲೆಲ್ಲಾ ಅವರಿಗೆ ಸಹಕರಿಸುವಂತೆ ಸಿಬಿಐ, ಗುಪ್ತಚರ ಬ್ಯುರೋ ಹಾಗೂ ದಿಲ್ಲಿ ಪೊಲೀಸ್ ಮುಖ್ಯಸ್ಥರಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News