ಸಿಜೆಐ ವಿರುದ್ಧದ ಆರೋಪಗಳ ಪರಿಶೀಲನಾ ಸಮಿತಿಯಿಂದ ದೂರ ಸರಿದ ನ್ಯಾ.ರಮಣ

Update: 2019-04-25 17:34 GMT

ಹೊಸದಿಲ್ಲಿ,ಎ.25: ಭಾರತದ ಮುಖ್ಯ ನ್ಯಾಯಾಧೀಶ ರಂಜನ ಗೊಗೊಯಿ ಅವರ ವಿರುದ್ಧ ಮಾಡಲಾಗಿರುವ ಲೈಂಗಿಕ ಕಿರುಕುಳ ಆರೋಪಗಳ ಪರಿಶೀಲನೆಗಾಗಿ ರಚಿಸಲಾಗಿರುವ ಆಂತರಿಕ ವಿಚಾರಣಾ ಸಮಿತಿಯಿಂದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಎನ್.ವಿ.ರಮಣ ಅವರು ದೂರ ಸರಿದಿದ್ದಾರೆ.

ನ್ಯಾ.ರಮಣ ಅವರು ಮು.ನ್ಯಾ. ಗೊಗೊಯಿ ಅವರ ಆಪ್ತರಾಗಿದ್ದಾರೆ ಎಂದು ಈ ಆರೋಪಗಳನ್ನು ಮಾಡಿರುವ ಸರ್ವೋಚ್ಚ ನ್ಯಾಯಾಲಯದ ಮಾಜಿ ಮಹಿಳಾ ಉದ್ಯೋಗಿ ಬುಧವಾರ ಆಪಾದಿಸಿದ್ದರು.

ಸಮಿತಿಯನ್ನು ಈಗ ಪುನರ್ ರಚಿಸಲಾಗುವುದು.ಮುಖ್ಯ ನ್ಯಾಯಮೂರ್ತಿಗಳ ನಂತರ ಸರ್ವೋಚ್ಚ ನ್ಯಾಯಾಲಯದ ಅತ್ಯಂತ ಹಿರಿಯ ನ್ಯಾಯಾಧೀಶರಾಗಿರುವ ಎಸ್.ಎ.ಬೋಬ್ಡೆ ನೇತೃತ್ವದ ಸಮಿತಿಯಲ್ಲಿ ನ್ಯಾ.ಇಂದಿರಾ ಬ್ಯಾನರ್ಜಿ ಅವರೂ ಸದಸ್ಯರಾಗಿದ್ದಾರೆ.

ಶುಕ್ರವಾರ ತನ್ನೆದುರು ಹಾಜರಾಗುವಂತೆ ಸಮಿತಿಯು ಕಳುಹಿಸಿದ್ದ ನೋಟಿಸ್‌ಗೆ ನೀಡಿದ್ದ ಉತ್ತರದಲ್ಲಿ ಸರ್ವೋಚ್ಚ ನ್ಯಾಯಾಲಯದ ಮಾಜಿ ಮಹಿಳಾ ಸಿಬ್ಬಂದಿ ನ್ಯಾ.ರಮಣ್ ನೇಮಕದ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News