ಪ್ರಧಾನಿ ಹೆಲಿಕಾಪ್ಟರ್ ತಪಾಸಣೆ ಪ್ರಕರಣ: ಐಎಎಸ್ ಅಧಿಕಾರಿಯ ಅಮಾನತು ರದ್ದುಗೊಳಿಸಿದ ಚುನಾವಣಾ ಆಯೋಗ

Update: 2019-04-25 18:13 GMT

ಹೊಸದಿಲ್ಲಿ, ಎ. 25: ಒಡಿಶಾದಲ್ಲಿ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಪರಿಶೀಲನೆ ನಡೆಸಿದ ಆರೋಪದಲ್ಲಿ ಐಎಎಸ್ ಅಧಿಕಾರಿ ಮುಹಮ್ಮದ್ ಮುಹ್ಸಿನ್ ಅಮಾನತನ್ನು ಚುನಾವಣಾ ಆಯೋಗ ಬುಧವಾರ ಸಂಜೆ ಹಿಂದೆಗೆದುಕೊಂಡಿದೆ. ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ ಅಮಾನತಿಗೆ ತಡೆ ನೀಡಿ ಎರಡು ಕಡೆಯಿಂದ ಮೂರು ವಾರಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ ಕೂಡಲೇ ಚುನಾವಣಾ ಆಯೋಗ ಈ ನಿರ್ಧಾರ ತೆಗೆದುಕೊಂಡಿದೆ.

 ಈ ಹಿಂದೆ ಚುನಾವಣಾ ಆಯೋಗ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಚುನಾವಣೆ ಸಂದರ್ಭ ಪರಿಶೀಲನೆಯಿಂದ ಯಾರಿಗೂ ರಿಯಾಯಿತಿ ನೀಡುವ ನಿಯಮ ಇಲ್ಲ ಎಂದು ಪ್ರತಿಪಕ್ಷಗಳು ಹೇಳಿದ್ದವು. ಅಮಾನತಿಗೆ ತಡೆ ನೀಡಿದ್ದ ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ, ಎಸ್‌ಪಿಜಿಯ ಸಂರಕ್ಷಣೆಗೆ ಒಳಗಾದವರು ಯಾವುದಕ್ಕೂ, ಎಲ್ಲದಕ್ಕೂ ಅರ್ಹರು ಎಂದು ಹೇಳಲು ಸಾಧ್ಯವಿಲ್ಲ. ಚುನಾವಣಾ ಅಧಿಕಾರಿಗಳು ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ಖಾಸಗಿ ವಾಹನವನ್ನು ಒಂದಕ್ಕಿಂತ ಹೆಚ್ಚು ಬಾರಿ ತಪಾಸಣೆ ನಡೆಸಿದ್ದಾರೆ. ಒಡಿಶಾ ಮುಖ್ಯಮಂತ್ರಿಯ ವಾಹನಗಳನ್ನು ಕೂಡ ತಪಾಸಣೆ ನಡೆಸಲಾಗಿದೆ ಎಂದಿತ್ತು. ಮುಹಮ್ಮದ್ ಮುಹ್ಸಿನ್ 1996 ಕರ್ನಾಟಕ ಶ್ರೇಣಿಯ ಐಎಎಸ್ ಅಧಿಕಾರಿ. ಅವರ ವಿರುದ್ಧ ಅವಿಧೇಯತೆ ಹಾಗೂ ಕರ್ತವ್ಯ ಲೋಪದ ಆರೋಪ ಹೊರಿಸಿ ಚುನಾವಣಾ ಆಯೋಗ ಅಮಾನತು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News