ಬ್ಯಾಂಕ್ ಗಳ ವಾರ್ಷಿಕ ತಪಾಸಣೆ ವರದಿಯನ್ನು ಬಹಿರಂಗಪಡಿಸಲು ಆರ್ ಬಿಐಗೆ ಸುಪ್ರೀಂ ಆದೇಶ
ಹೊಸದಿಲ್ಲಿ, ಎ.26: ವಿವಿಧ ಬ್ಯಾಂಕುಗಳ ವಾರ್ಷಿಕ ತಪಾಸಣೆ ವರದಿಯನ್ನು ಮಾಹಿತಿ ಹಕ್ಕು ಅಧಿನಿಯಮದಂತೆ (ಆರ್ ಟಿಐ ಆ್ಯಕ್ಟ್ 2005) ಬಹಿರಂಗಪಡಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಗೆ ಶುಕ್ರವಾರ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಆರ್ ಟಿಐ ಕಾರ್ಯಕರ್ತರಾದ ಸುಭಾಷ್ ಚಂದ್ರ ಅಗರ್ವಾಲ್ ಮತ್ತು ಗಿರೀಶ್ ಮಿತ್ತಲ್ ಈ ಸಂಬಂಧ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ್ ರಾವ್ ಮತ್ತು ಎಂ.ಆರ್.ಶಾ ನೇತೃತ್ವದ ನ್ಯಾಯಪೀಠ ಆರ್ ಬಿಐಗೆ ಆದೇಶ ನೀಡಿದೆ.
ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ ) ಮತ್ತಿತರ ಬ್ಯಾಂಕ್ ಗಳ ವಾರ್ಷಿಕ ತಪಾಸಣೆ ವರದಿಗಳನ್ನು ಆರ್ ಬಿಐ ಸಾರ್ವಜನಿಕವಾಗಿ ಬಹಿರಂಗಪಡಿಸುವುದನ್ನು ಯಾವುದೇ ಕಾರಣಕ್ಕೂ ನಿರಾಕರಿಸುವಂತಿಲ್ಲ ಎಂದು ಉನ್ನತ ನ್ಯಾಯಾಲಯ ಹೇಳಿದೆ. ಇದಕ್ಕೂ ಮುಂಚೆ, ಈ ವಿಷಯದಲ್ಲಿ ಸಿಐಸಿ ನಿರ್ದಿಷ್ಟ ನಿರ್ದೇಶನ ನೀಡಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.