×
Ad

ಸ್ಫೋಟಗಳಿಂದ ನಲುಗಿದ ಶ್ರೀಲಂಕಾದಲ್ಲಿ ಕ್ರಿಕೆಟಿಗ ಸಂಗಕ್ಕರ ಭಾಷಣದ ವಿಡಿಯೋ ವೈರಲ್

Update: 2019-04-26 15:01 IST

ಕೊಲಂಬೋ, ಎ.26: ಈಸ್ಟರ್ ರವಿವಾರ ಸಂಭವಿಸಿದ ಸರಣಿ ಸ್ಫೋಟಗಳಿಂದ ನಲುಗಿ ಹೋಗಿರುವ ಶ್ರೀಲಂಕಾದಲ್ಲೀಗ ಕ್ರಿಕೆಟಿಗ ಕುಮಾರ್ ಸಂಗಕ್ಕರ ಕೆಲ ತಿಂಗಳ ಹಿಂದೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾಡಿದ್ದ ಏಕತೆಯ ಭಾಷಣದ ವಿಡಿಯೋ ವೈರಲ್ ಆಗುತ್ತಿದೆ.

ಮಕ್ಕಳ ಚಪ್ಪಾಳೆ ಸದ್ದಿನ ಕುರಿತು ಮಾತನಾಡಿದ್ದ  ಸಂಗಕ್ಕರ, “ಈ ಸದ್ದು ನಿಮಗೆ ಕೇಳಿಸುತ್ತಿದೆಯೇ ? ನಾವೆಲ್ಲರೂ ಜತೆಯಾಗಿಯೇ ಒಗ್ಗಟ್ಟಿನಿಂದ ದುಡಿದರೆ ಶ್ರೀಲಂಕಾ ಹೀಗಿರುತ್ತದೆ'' ಎಂದು ಹೇಳಿದ್ದರು.

ವಿವಿಧತೆಯಲ್ಲಿ ಏಕತೆಯ ಸಂದೇಶವನ್ನು ತಮ್ಮ ಆ ಭಾಷಣದಲ್ಲಿ ಕುಮಾರ್ ಸಂಗಕ್ಕರ , “ಒಗ್ಗಟ್ಟಿದ್ದರೆ ನಾವು ಯಾವುದೇ ಪರಿಸ್ಥಿತಿ ನಿಭಾಯಿಸಬಹುದು. ಆದರೆ ನಮ್ಮಲ್ಲಿ ಒಡಕುಂಟಾದರೆ ಅಲ್ಲಿ ಯಾವುದೇ ಹೆಚ್ಚಿನ ಭರವಸೆಯಿರುವುದಿಲ್ಲ'' ಎಂದಿದ್ದರು.

ಕ್ರೀಡಾ ಸಮವಸ್ತ್ರ ಧರಿಸಿದ್ದ ವಿದ್ಯಾರ್ಥಿಗಳಿಗೆ ತಮ್ಮ ಭಾಷಣದಲ್ಲಿ ಸಂಗಕ್ಕರ, “ನಿಮಗಿಂತ ಮುಂಚಿನ ಜನರು ಏನು ಮಾಡಿದ್ದರೆಂಬುದನ್ನು ಮರೆತು ಬಿಡಿ. ನಿಮ್ಮ ಮುಂದೆ ಇನ್ನೊಂದು ತಲೆಮಾರು ಇದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಶ್ರೀಲಂಕಾದ ಏಕತೆಯನ್ನು ಕಾಪಾಡುವುದು ನಿಮ್ಮ ಜವಾಬ್ದಾರಿ'' ಎಂಬ ಸಂದೇಶ ನೀಡಿದ್ದರು.

ಇದೀಗ ಸ್ಫೋಟಗಳಿಂದ ತತ್ತರಿಸಿರುವ ಶ್ರೀಲಂಕಾದ ಜನರು ಸಂಗಕ್ಕರ ಭಾಷಣದ ಸ್ಫೂರ್ತಿ ಪಡೆಯುತ್ತಿದ್ದಾರೆ. ಒಗ್ಗಟ್ಟಿನಲ್ಲಿ ನಂಬಿಕೆ ಇರಿಸಿ ಎಂದು ಸಂದೇಶ ಹರಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News