ಬುರ್ಜ್ ಖಲೀಫಾದ ಬೆಳಕಿನಲ್ಲಿ ಅರಳಿದ ಶ್ರೀಲಂಕಾ ಧ್ವಜ: ದ್ವೀಪ ರಾಷ್ಟ್ರದ ಬೆಂಬಲಕ್ಕೆ ನಿಂತ ದುಬೈ

Update: 2019-04-26 10:49 GMT

ದುಬೈ :  ಈಸ್ಟರ್ ರವಿವಾರದಂದು ನಡೆದ ಸರಣಿ ಸ್ಫೋಟಗಳಿಂದುಂಟಾದ ಸಾವು ನೋವುಗಳಿಂದ ಕಂಗೆಟ್ಟು ಹೋಗಿರುವ ಶ್ರೀಲಂಕಾದ ಬೆಂಬಲಕ್ಕೆ ದುಬೈ ನಿಂತಿದೆ.

ಇದರ ದ್ಯೋತಕವಾಗಿ ಜಗತ್ತಿನ ಅತ್ಯಂತ ಎತ್ತರದ ದುಬೈಯ ಬುರ್ಜ್ ಖಲೀಫಾ ಕಟ್ಟಡ ಶ್ರೀಲಂಕಾದ ಧ್ವಜದ ಬಣ್ಣದ ದೀಪಾಲಂಕಾರದೊಂದಿಗೆ ಗುರುವಾರ ಶೋಭಿಸಿದೆ. ಸಂಯಮ ಹಾಗೂ ಸೌಹಾರ್ದತೆಯ ಜಗತ್ತನ್ನು ನಿರ್ಮಿಸುವ ಆಶಯವನ್ನೂ ಬುರ್ಜ್ ಖಲೀಫಾದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ವ್ಯಕ್ತಪಡಿಸಿದೆ.

ಬುರ್ಜ್ ಖಲೀಫಾ ಹೊರತಾಗಿ ಅಬುಧಾಬಿಯ ಖ್ಯಾತ ಕಟ್ಟಡಗಳಾದ ದಿ ಎಮಿರೇಟ್ಸ್ ಪ್ಯಾಲೇಸ್, ಶೇಖ್ ಝಯೀದ್ ಬ್ರಿಡ್ಜ್, ಎಡಿಎನ್‍ಒಸಿ ಕಟ್ಟಡ, ಕ್ಯಾಪಿಟಲ್ ಗೇಟ್ ಮತ್ತಿತರ ಕಟ್ಟಡಗಳೂ ಶ್ರೀಲಂಕಾದ ಧ್ವಜದ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News