ಕಾರ್ಯಾಚರಣೆ ನಡೆಸಿ ಗಿಳಿಯನ್ನು ವಶಕ್ಕೆ ಪಡೆದ ಪೊಲೀಸರು: ಅಷ್ಟಕ್ಕೂ ಅದು ಮಾಡಿದ್ದೇನು?

Update: 2019-04-26 11:26 GMT

ಬ್ರೆಜಿಲಿಯಾ, ಎ.26: ಬ್ರೆಜಿಲ್ ದೇಶದ ಡ್ರಗ್ಸ್ ಡೀಲರ್ ಗಳಿಂದ ತರಬೇತಿ ಪಡೆದಿದ್ದ ಗಿಳಿಯನ್ನು ಡ್ರಗ್ಸ್ ಮಾಫಿಯಾದ ಮೇಲೆ ನಡೆಸಿದ ದಾಳಿಯಲ್ಲಿ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಪಿಯಾಯುಯ್ ರಾಜ್ಯದ ರಾಜಧಾನಿ ವಿಲಾ ಇರ್ಮಾ ಡುಲ್ಸ್ ಎಂಬಲ್ಲಿ ಪೊಲೀಸ್ ಕಾರ್ಯಾಚರಣೆಯ ವೇಳೆ ಈ ಗಿಳಿಯನ್ನು ಪತ್ತೆ ಹಚ್ಚಲಾಗಿದೆ. ಪೊಲೀಸರು ಬರುತ್ತಾರೆಂದರೆ ಡ್ರಗ್ಸ್ ಮಾಫಿಯಾ ಮಂದಿಗೆ “ಮಮ್, ದಿ ಪೊಲೀಸ್'' ಎಂದು ಹೇಳಿ ಎಚ್ಚರಿಸಲು ಈ ಗಿಳಿಗೆ ತರಬೇತಿ ನೀಡಲಾಗಿತ್ತು.

ಸ್ಥಳೀಯ ದಂಪತಿ ಡ್ರಗ್ಸ್ ಜಾಲ ನಡೆಸುತ್ತಿದ್ದ ಸ್ಥಳದ ಮೇಲೆ ಪೊಲೀಸ್ ದಾಳಿ ನಡೆದಿತ್ತು. ಪೊಲೀಸರು ಹತ್ತಿರ ಬರುತ್ತಿದ್ದಂತೆಯೇ ಗಿಳಿ ಬೊಬ್ಬೆ ಹೊಡೆಯಲು ಆರಂಭಿಸಿತ್ತು. ಆದರೆ ಪೊಲೀಸರು ವಶಪಡಿಸಿಕೊಂಡ ನಂತರ ಗಿಳಿ  ತನ್ನ ಬಾಯ್ಮುಚ್ಚಿ ಕುಳಿತಿದೆ, ಯಾವುದೇ ಸದ್ದು ಮಾಡಿಲ್ಲ. ಹಲವಾರು ಪೊಲೀಸರು ಅತ್ತಿತ್ತ ಹೋದರೂ ಗಿಳಿ ಮಾತನಾಡಿಲ್ಲ. ಈ ಗಿಳಿಯನ್ನು ಸ್ಥಳೀಯ ಪ್ರಾಣ ಸಂಗ್ರಹಾಲಯಕ್ಕೆ ನೀಡಲಾಗುವುದೆಂದು ತಿಳಿದು ಬಂದಿದೆ. ಅಲ್ಲಿ ಅದು ಮೂರು ತಿಂಗಳುಗಳ ಕಾಲ ಇದ್ದು ಹಾರಲು ಕಲಿತ ನಂತರ ಅದನ್ನು ಬಿಡುಗಡೆಗೊಳಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News