ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ದುಬೈ ಮೂಲದ ಭಾರತೀಯ ವಲಸಿಗನ ಸಾವು

Update: 2019-04-26 13:29 GMT

ಹೊಸದಿಲ್ಲಿ, ಎ.26: ನಾಪತ್ತೆಯಾಗಿದ್ದ ದುಬೈ ಮೂಲದ ಭಾರತೀಯ ವಲಸಿಗ ಜುನೊ ಶ್ರೀವಾಸ್ತವ ಶ್ರೀಲಂಕಾದಲ್ಲಿ ಕಳೆದ ರವಿವಾರ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿರುವುದಾಗಿ ದುಬೈಯ ಭಾರತದ ಕಾನ್ಸುಲ್ ಜನರಲ್ ವಿಪುಲ್ ದೃಢಪಡಿಸಿದ್ದಾರೆ.

ಎಪ್ರಿಲ್ 20ರಂದು ತನ್ನ ಬ್ರಿಟಿಷ್ ಸಹೋದ್ಯೋಗಿ ಲಾರೈನ್ ಕ್ಯಾಂಪ್‌ಬೆಲ್‌ರೊಂದಿಗೆ ಸಿನಾಮನ್ ಗ್ರಾಂಡ್ ಹೋಟೆಲ್‌ನಲ್ಲಿ ಶ್ರೀವಾಸ್ತವ ಉಳಿದುಕೊಂಡಿದ್ದರು. ಲಾರೈನ್ ಕ್ಯಾಂಪ್‌ಬೆಲ್ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿರುವುದಾಗಿ ಆಕೆಯ ಕುಟುಂಬದವರು ಬುಧವಾರ ದೃಢಪಡಿಸಿದ್ದರು. ಶ್ರೀಲಂಕಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ದುಬೈ ಮೂಲದ ಭಾರತೀಯ ವಲಸಿಗರು ಮೃತಪಟ್ಟಿದ್ದಾರೆ.

ರಝೀನಾ ಕುಕ್ಕಾಡಿ (58 ವರ್ಷ) ಮತ್ತು ಜುನೊ ಶ್ರೀವಾಸ್ತವ(42 ವರ್ಷ) ಎಂದು ವಿಪುಲ್ ತಿಳಿಸಿರುವುದಾಗಿ ಖಲೀಜ್ ಟೈಮ್ಸ್ ವರದಿ ಮಾಡಿದೆ. ಸ್ಪೋಟ ಸಂಭವಿಸಿದ ಮರುದಿನವೇ ಶ್ರೀವಾಸ್ತವರ ಸಹೋದರ ಮತ್ತು ಪತ್ನಿ ರಚನಾ ಕೊಲಂಬೋ ತಲುಪಿದ್ದು ಮೃತದೇಹದ ಅವಶೇಷದ ಗುರುತು ಪತ್ತೆಹಚ್ಚಿದ್ದಾರೆ ಎಂದು ವಿಪುಲ್ ತಿಳಿಸಿದ್ದಾರೆ. ಉತ್ತರಪ್ರದೇಶ ಮೂಲದವರಾದ ಶ್ರೀವಾಸ್ತವ ದುಬೈಯ ಸಂಸ್ಥೆಯೊಂದರಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News