×
Ad

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ ಪ್ರಕರಣ :ಮೃತರ ಸಂಖ್ಯೆ 359ರಿಂದ 253ಕ್ಕೆ ಇಳಿಕೆ

Update: 2019-04-26 20:44 IST

ಕೊಲಂಬೋ, ಎ. 26: ಈಸ್ಟರ್ ರವಿವಾರ ಸಂಭವಿಸಿದ ಸರಣಿ ಆತ್ಮಹತ್ಯಾ ಬಾಂಬ್ ಸ್ಫೋಟಗಳಲ್ಲಿ ಮೃತಪಟ್ಟವರ ಸಂಖ್ಯೆಯನ್ನು ಶ್ರೀಲಂಕಾ ಅಧಿಕಾರಿಗಳು 359ರಿಂದ 253ಕ್ಕೆ ತಗ್ಗಿಸಿದ್ದಾರೆ. ಅತ್ಯಂತ ಛಿದ್ರಗೊಂಡಿರುವ ಕೆಲವು ದೇಹಗಳನ್ನು ಎರಡು ಬಾರಿ ಲೆಕ್ಕ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ವೈದ್ಯಕೀಯ ಪರೀಕ್ಷಕರು ಎಲ್ಲ ದೇಹಗಳ ಪರೀಕ್ಷೆಗಳನ್ನು ಗುರುವಾರ ರಾತ್ರಿಯ ವೇಳೆಗೆ ಮುಗಿಸಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಹಲವರನ್ನು ಒಂದಕ್ಕಿಂತ ಹೆಚ್ಚು ಬಾರಿ ಲೆಕ್ಕ ಮಾಡಲಾಗಿದೆ ಎಂಬ ತೀರ್ಮಾನಕ್ಕೆ ಅವರು ಬಂದಿದ್ದಾರೆ.

ಶವಪರೀಕ್ಷೆ ಮತ್ತು ಡಿಎನ್‌ಎ ವರದಿಗಳನ್ನು ತಾಳೆ ಹಾಕಿದ ಬಳಿಕ ಬಿಡುಗಡೆಗೊಳಿಸಲಾದ ಅಧಿಕೃತ ಸಾವಿನ ಸಂಖ್ಯೆಯಲ್ಲಿ 106 ಕಡಿತವಾಗಿದೆ ಎಂದು ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ಹೆಚ್ಚಿನ ಬಲಿಪಶುಗಳ ದೇಹ ತೀರಾ ಜರ್ಝರಿತವಾಗಿತ್ತು. ಹಾಗಾಗಿ, ಅವರನ್ನು ಎರಡು ಬಾರಿ ಲೆಕ್ಕಹಾಕಲಾಗಿದೆ’’ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News