ನೀರವ್ ಮೋದಿ, ಚೋಕ್ಸಿಯ 13 ಐಷಾರಾಮಿ ಕಾರು 3.29 ಕೋಟಿ ರೂ.ಗೆ ಹರಾಜು

Update: 2019-04-26 16:11 GMT

ಹೊಸದಿಲ್ಲಿ, ಎ.26: ಪಿಎನ್‌ಬಿ ವಂಚನೆ ಹಗರಣದ ಪ್ರಮುಖ ಆರೋಪಿಗಳಾದ ವಜ್ರೋದ್ಯಮಿ ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿಗೆ ಸೇರಿದ 13 ಐಷಾರಾಮಿ ಕಾರುಗಳನ್ನು ಹರಾಜು ಹಾಕಲಾಗಿದ್ದು, ಇದರಿಂದ ಸರಕಾರಿ ಖಜಾನೆಗೆ 3.29 ಕೋಟಿ ರೂ. ಸೇರ್ಪಡೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

 ಈ ವಾಹನಗಳನ್ನು ಜಾರಿ ನಿರ್ದೇಶನಾಲಯವು ಅಕ್ರಮ ಹಣ ಸಾಗಣೆ ತಡೆ ಕಾಯ್ದೆ(ಪಿಎಂಎಲ್‌ಎ)ಯಡಿ ಮುಟ್ಟುಗೋಲು ಹಾಕಿಕೊಂಡಿತ್ತು. ಇದರಲ್ಲಿ 13 ಐಷಾರಾಮಿ ಕಾರುಗಳನ್ನು (11 ಕಾರು ನೀರವ್ ಮೋದಿಯದ್ದು, 2 ಚೋಕ್ಸಿಯದ್ದು) ಹರಾಜು ಹಾಕಲು ಜಾರಿ ನಿರ್ದೇಶನಾಲಯ ಕಳೆದ ತಿಂಗಳು ಮುಂಬೈಯ ಪಿಎಂಎಲ್‌ಎ ನ್ಯಾಯಾಲಯದಿಂದ ಅನುಮತಿ ಪಡೆದಿತ್ತು. ಮೆಟಲ್ ಸ್ಕ್ರಾಪ್ ಟ್ರೇಡ್ ಕಾರ್ಪೊರೇಶನ್ ಎಪ್ರಿಲ್ 25ರಂದು ಹರಾಜು ಪ್ರಕ್ರಿಯೆ ನಡೆಸಿದೆ. ಇದರಲ್ಲಿ 12 ಕಾರುಗಳು 3,28,94, 293 ರೂ.ಗೆ ಹರಾಜಾಗಿದೆ . ಕಳೆದ ತಿಂಗಳು ಆದಾಯ ತೆರಿಗೆ ಇಲಾಖೆ ನೀರವ್ ಮೋದಿಗೆ ಸೇರಿದ ಹಲವು ಕಲಾಕೃತಿಗಳನ್ನು 59.37 ಕೋಟಿ ರೂ.ಗೆ ಹರಾಜು ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News