ಶ್ರೀಲಂಕಾ ಹೈಕಮಿಷನ್‌ಗೆ ಪಿಎಫ್‌ಐ ನಿಯೋಗ ಭೇಟಿ

Update: 2019-04-27 05:37 GMT

ಹೊಸದಿಲ್ಲಿ, ಎ.27: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಅಧ್ಯಕ್ಷ ಇ.ಅಬೂಬಕರ್ ನೇತೃತ್ವದ ನಿಯೋಗವು ಶುಕ್ರವಾರ ಶ್ರೀಲಂಕಾ ಹೈಕಮಿಷನ್‌ಗೆ ಭೇಟಿ ನೀಡಿ ಇತ್ತೀಚೆಗೆ ಕೊಲಂಬೊದಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ತತ್ತರಿಸಿರುವ ಶ್ರೀಲಂಕಾ ಜನತೆ ಮತ್ತು ಸರ್ಕಾರದೊಂದಿಗೆ ತಮ್ಮ ಭ್ರಾತೃತ್ವವನ್ನು ವ್ಯಕ್ತಪಡಿಸಿದೆ. 250ಕ್ಕಿಂತಲೂ ಹೆಚ್ಚು ಜೀವಗಳನ್ನು ಬಲಿ ಪಡೆದ ಸರಣಿ ಸ್ಫೋಟ ಕೃತ್ಯವನ್ನು ಖಂಡಿಸಿದ ಪಾಪ್ಯುಲರ್ ಫ್ರಂಟ್ ಅಧ್ಯಕ್ಷ ಇ.ಅಬೂಬಕರ್, ಇದು ಮಾನವೀಯತೆಯ ಮೇಲಿನ ಆಕ್ರಮಣ ಎಂದು ಹೇಳಿದರು.

 ಸಮಾಜದ ಯಾವುದೇ ವರ್ಗಗಳ ವಿರುದ್ಧ ಪ್ರತೀಕಾರದ ಹಿಂಸಾಚಾರವನ್ನು ಹರಡುವುದಕ್ಕೆ ಅವಕಾಶ ಮಾಡಿಕೊಡದ ಮೂಲಕ ಶ್ರೀಲಂಕಾ ಸರ್ಕಾರವು ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿಯೋಗದಲ್ಲಿ ಪಿಎಫ್‌ಐ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಇ.ಎಂ.ಅಬ್ದುಲ್ ರಹಿಮಾನ್, ಅಡ್ವೊಕೇಟ್ ಮುಹಮ್ಮದ್ ಯೂಸುಫ್ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶಕ ಡಾ.ಮುಹಮ್ಮದ್ ಶಮೋನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News