ಪೊಲೀಸ್ ದೌರ್ಜನ್ಯ ಆರೋಪ: ಅನಾರೋಗ್ಯಪೀಡಿತ ವೃದ್ಧ ಖೈದಿ ಮೃತ್ಯು

Update: 2019-04-27 15:06 GMT

ಜೈಪುರ,ಎ.27: ವೃದ್ಧ ಅನಾರೋಗ್ಯಪೀಡಿತ ಮುಸ್ಲಿಂ ಖೈದಿಯೊಬ್ಬರು ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿ ಮೃತಪಟ್ಟ ಘಟನೆ ರಾಜಸ್ತಾನದ ಕೋಟಾದಲ್ಲಿ ನಡೆದಿದೆ.

ಮೃತ ಖೈದಿಯನ್ನು ಮುಹಮ್ಮದ್ ರಮಝಾನ್ ಎಂದು ಗುರುತಿಸಲಾಗಿದೆ. ರಾಜಸ್ತಾನದ ಮಂಗ್ರೋಲ್ ನಿವಾಸಿಯಾಗಿರುವ ರಮಝಾನ್ ಅವರನ್ನು ಬರನ್ ಜಿಲ್ಲಾ ಕಾರಾಗೃಹದಲ್ಲಿ ಕೂಡಿಹಾಕಲಾಗಿತ್ತು. ರಮಝಾನ್ ಸಾವಿಗೆ ಕಾರಣರಾದವರನ್ನು ಬಂಧಿಸದ ಹೊರತು ಮೃತದೇಹವನ್ನು ಕೊಂಡೊಯ್ಯುವುದಿಲ್ಲ ಮತ್ತು ಮರಣೋತ್ತರ ಪರೀಕ್ಷೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಮೃತರ ಕುಟುಂಬಸ್ಥರು, ರಮಝಾನ್ ಅವರನ್ನು ಭೇಟಿಯಾಗಲು ಜೈಲು ಸಿಬ್ಬಂದಿಗೆ 500 ರೂ. ಲಂಚ ನೀಡಲು ಅವರ ಮಗ ಮತ್ತು ಪತ್ನಿ ನಿರಾಕರಿಸಿದ ಕಾರಣಕ್ಕೆ ಪೊಲೀಸರು ರಮಝಾನ್ ಅವರನ್ನು ತಲೆಕೆಳಗಾಗಿ ನೇತುಹಾಕಿ ಥಳಿಸಿದ್ದರು ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊ ತುಣುಕಿನಲ್ಲಿ ರಮಝಾನ್‌ ಪೊಲೀಸರು ಚಿತ್ರಹಿಂಸೆ ನೀಡಿದ ಕಾರಣ ತನಗೆ ಈ ಪರಿಸ್ಥಿತಿ ಬಂದಿರುವುದಾಗಿ ಆರೋಪಿಸಿದ್ದಾರೆ.

“ಜೈಲು ಸಿಬ್ಬಂದಿ ನನ್ನ ಮೇಲೆ ಎಂಟು ಬಾರಿ ಹಲ್ಲೆ ನಡೆಸಿದ್ದಾರೆ. ನಾನು ಅಸ್ವಸ್ಥನಾದಾಗ ನನಗೆ ಸರಿಯಾದ ಚಿಕಿತ್ಸೆಯನ್ನೂ ನೀಡಲಿಲ್ಲ” ಎಂದು ರಮಝಾನ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News