ಏರ್ ಇಂಡಿಯಾ ಸಾಫ್ಟ್‌ವೇರ್ ಸ್ಥಗಿತ: 155 ವಿಮಾನಗಳು ವಿಳಂಬ

Update: 2019-04-27 15:14 GMT

ಹೊಸದಿಲ್ಲಿ,ಎ.27: ತಾಂತ್ರಿಕ ದೋಷದ ಪರಿಣಾಮ ಏರ್ ಇಂಡಿಯಾದ ಚೆಕ್ ಇನ್ ಸಾಫ್ಟ್‌ವೇರ್ ವ್ಯವಸ್ಥೆ ಐದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡ ಪರಿಣಾಮ ಜಗತ್ತಿನಾದ್ಯಂತ ಏರ್ ಇಂಡಿಯಾ ಪ್ರಯಾಣಿಕರು ಪರದಾಡಿದ ಘಟನೆ ಶನಿವಾರ ನಡೆದಿದೆ.

ಈ ಕುರಿತು ಹೇಳಿಕೆ ನೀಡಿದ ರಾಷ್ಟ್ರೀಯ ವೈಮಾನಿಕ ಸಂಸ್ಥೆಯ ಮುಖ್ಯಸ್ಥ ಮತ್ತು ವ್ಯವಸ್ಥಾಪನಾ ನಿರ್ದೇಶಕ (ಸಿಎಂಡಿ) ಅಶ್ವನಿ ಲೊಹಾನಿ, ಚೆಕ್ ಇನ್, ಬ್ಯಾಗೇಜ್ ಮತ್ತು ಕಾಯ್ದಿರಿಸುವಿಕೆಯನ್ನು ನೋಡಿಕೊಳ್ಳುವ ಪ್ರಯಾಣಿಕ ಸೇವಾ ವ್ಯವಸ್ಥೆಯ (ಪಿಎಸ್‌ಎಸ್) ಸಾಫ್ಟ್‌ವೇರ್ ಶನಿವಾರ ಮುಂಜಾನೆ 3.30ರಿಂದ 8.45ರ ವರೆಗೆ ಸ್ಥಗಿತಗೊಂಡ ಪರಿಣಾಮ ಈ ಅವ್ಯವಸ್ಥೆ ಉಂಟಾಗಿದೆ ಎಂದು ತಿಳಿಸಿದ್ದಾರೆ. ಏರ್ ಇಂಡಿಯಾದ ಪಿಎಸ್‌ಎಸ್ ಅನ್ನು ಅಮೆರಿಕದ ಅಟ್ಲಾಂಟದಲ್ಲಿರುವ ಎಸ್‌ಐಟಿಎ ಕಂಪೆನಿ ನಿಬಾಯಿಸುತ್ತದೆ.

ಇದರಿಂದ ವಿಮಾನ ಸಂಸ್ಥೆಯ ಸಿಬ್ಬಂದಿ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ನೀಡಲು ಸಾಧ್ಯವಾಗದ ಕಾರಣ ಜಗತ್ತಿನಾದ್ಯಂತ ಏರ್ ಇಂಡಿಯಾದ ಸಾವಿರಾರು ಪ್ರಯಾಣಿಕರು ಸಮಸ್ಯೆ ಎದುರಾಸಬೇಕಾಗಿ ಬಂತು.

ಪಿಎಸ್‌ಎಸ್ ಸ್ಥಗಿತಗೊಂಡ ಕಾರಣ 85 ವಿಮಾನಗಳು ವಿಳಂಬವಾಗಿದ್ದು ಸಮಸ್ಯೆಯ ಪಾಶ್ಚಾತ್ ಪರಿಣಾಮ ದಿನವಿಡೀ ಹಾರಾಟ ನಡೆಸಿದ ವಿಮಾನಗಳ ಮೇಲೆಯೂ ಬಿದ್ದಿದೆ ಎಂದು ಲೊಹಾನಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News