ಮೋದಿ ರೋಡ್ ಶೋ: ರಸ್ತೆ ತೊಳೆಯಲು 1.4 ಲಕ್ಷ ಲೀಟರ್ ಕುಡಿಯುವ ನೀರು ಬಳಕೆ !

Update: 2019-04-27 15:21 GMT

ಹೊಸದಿಲ್ಲಿ, ಎ. 27: ಶೇ.30ಕ್ಕಿಂತಲೂ ಅಧಿಕ ಸಂಖ್ಯೆಯ ನಾಗರಿಕರು ನಳ್ಳಿನೀರಿನ ಪೂರೈಕೆಯಿಂದ ವಂಚಿತರಾಗಿರುವ ವಾರಣಾಸಿ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಮುನ್ನಾ ದಿನವಾದ ಗುರುವಾರ ಸಂದರ್ಭದಲ್ಲಿ ನಡೆಸಿದ ರೋಡ್‌ಶೋ ವೇಳೆ 1.4 ಲಕ್ಷ ಲೀಟರ್ ಕುಡಿಯುವ ನೀರನ್ನು, ರಸ್ತೆ ತೊಳೆಯಲೆಂದು ಬಳಸಲಾಗಿತ್ತು. ಮರುದಿನ ಪ್ರಧಾನಿ ನರೇಂದ್ರ ಮೋದಿ, ನಾಮಪತ್ರ ಸಲ್ಲಿಕೆಯ ಮುನ್ನ ಬಿಜೆಪಿ ಆಯೋಜಿಸಿದ ಬೃಹತ್ ರೋಡ್‌ಶೋದಲ್ಲಿ ಪಾಲ್ಗೊಂಡರು.

ಪ್ರಧಾನಿಯವರ ಆಗಮನದ ಹಿನ್ನೆಲೆಯಲ್ಲಿ ವಾರಾಣಸಿ ನಗರದ ರಸ್ತೆಗಳನ್ನು ಸ್ವಚ್ಛಗೊಳಿಸುವಂತೆ ನಮಗೆ ಸೂಚನೆಗಳು ಬಂದಿದ್ದವು ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕುಡಿಯುವ ನೀರಿನಿಂದ ರಸ್ತೆಗಳನ್ನು ಸ್ವಚ್ಛಗೊಳಿಸಲು ವಾರಾಣಸಿ ನಗರಪಾಲಿಕೆಯ 40 ನೀರಿನ ಟ್ಯಾಂಕರ್‌ಗಳು ಹಾಗೂ 409 ಕಾರ್ಮಿಕರನ್ನು ನಿಯೋಜಿಸಲಾಗಿತ್ತು.

ವಾರಾಣಸಿ ನಗರವು ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಹೊಂದಿರುವ ಹೊರತಾಗಿಯೂ ನಗರದ ಶೇ.70ರಷ್ಟು ಕುಟುಂಬಗಳು ಮಾತ್ರವೇ ನಳ್ಳಿ ನೀರಿನ ಸೌಲಭ್ಯ ಪಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News