×
Ad

ಜಗತ್ತಿನ ಅತಿ ದೊಡ್ಡ ವಜ್ರ ಪತ್ತೆ

Update: 2019-04-27 21:21 IST

ಗ್ಯಾಬೊರೋನ್ (ಬೋಟ್ಸ್‌ವಾನ), ಎ. 27: ಜಗತ್ತಿನ ಅತ್ಯಂತ ದೊಡ್ಡ ವಜ್ರಗಳ ಪೈಕಿ ಒಂದಾಗಿರುವ ವಜ್ರವೊಂದು ಬೋಟ್ಸ್‌ವಾನದಲ್ಲಿ ಪತ್ತೆಯಾಗಿದೆ ಎಂದು ವಜ್ರ ಗಣಿಗಾರಿಕಾ ಕಂಪೆನಿ ಹೇಳಿದೆ.

ಈ ವಜ್ರವು 1,758 ಕ್ಯಾರಟ್‌ನಷ್ಟು ತೂಗುತ್ತಿದೆ.

ಈವರೆಗೆ ಭೂಮಿಯಿಂದ ಹೊರದೆಗೆಯಲಾದ ಅತಿ ದೊಡ್ಡ ವಜ್ರಗಳ ಪೈಕಿ ಈ ವಜ್ರವೂ ಒಂದಾಗಿದೆ ಎಂದು ಮಧ್ಯಪೂರ್ವ ಬೋಟ್ಸ್‌ವಾನದಲ್ಲಿರುವ ಕರೋವೆ ವಜ್ರ ಗಣಿಯನ್ನು ನಡೆಸುತ್ತಿರುವ ಕೆನಡದ ಕಂಪೆನಿ ಲುಕ್ರಾದ ಸಿಇಒ ಐರಾ ಥಾಮಸ್ ಹೇಳಿದ್ದಾರೆ.

ಗುರುವಾರ ಹೊರದೆಗೆಯಲಾದ ವಜ್ರವು 352 ಗ್ರಾಮ್ ತೂಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News