ಭಾರತದಲ್ಲಿ ಮಾರಾಟವಾಗುವ ಶೇ.20 ಔಷಧಿಗಳು ನಕಲಿಯಂತೆ!

Update: 2019-04-27 15:54 GMT

ಹೊಸದಿಲ್ಲಿ, ಎ.27: ಭಾರತದಲ್ಲಿ ಮಾರಲ್ಪಡುವ ಶೇ.20 ಔಷಧೀಯ ವಸ್ತುಗಳು ನಕಲಿಯಾಗಿವೆ ಎಂದು ಅಮೆರಿಕದ ವ್ಯಾಪಾರ ಸಂಘಟನೆ ಎಚ್ಚರಿಸಿದೆ. ಭೌತಿಕ ಆಸ್ತಿ ರಕ್ಷಣೆ ಮತ್ತು ನಕಲಿ ಮತ್ತು ಕಲಬೆರಕೆಯ ಕ್ರೂರ ಮಾರುಕಟ್ಟೆ ಪರಿಶೀಲನೆ ಬಗ್ಗೆ ಸಿದ್ಧಪಡಿಸಲಾಗಿರುವ ವಾರ್ಷಿಕ ಸ್ಪೆಶಲ್ 301 ರಿಪೋರ್ಟ್ ಅನ್ನು ಸಂಘಟನೆ ಗುರುವಾರ ಬಿಡುಗಡೆ ಮಾಡಿದ್ದು, ಭಾರತದಲ್ಲಿ ಹೆಚ್ಚುತ್ತಿರುವ ನಕಲಿ ಮತ್ತು ಕಲಬೆರಕೆ ಔಷಧಿಗಳ ಬಗ್ಗೆ ಎಚ್ಚರಿಕೆ ನೀಡಿದೆ.

ಭಾರತ ಮತ್ತು ಚೀನಾ ಜಾಗತಿಕವಾಗಿ ಹಂಚಲ್ಪಡುವ ನಕಲಿ ಔಷಧಿಗಳ ಪ್ರಮುಖ ಮೂಲವಾಗಿದೆ. ನಿಖರವಾಗಿ ಹೇಳಲಾಗದಿದ್ದರೂ, ಭಾರತದಲ್ಲಿ ಮಾರಾಟವಾಗುವ ಶೇ.20 ಔಷಧಿಗಳು ನಕಲಿಯಾಗಿದ್ದು ಇದರಿಂದ ರೋಗಿಗಳ ಆರೋಗ್ಯ ಮತ್ತು ಸುರಕ್ಷತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ವರದಿ ತಿಳಿಸಿದೆ.

ತನ್ನದೇ ದೇಶದ ಜನರ ಆರೋಗ್ಯ ಮತ್ತು ಸುರಕ್ಷತೆಯನ್ನು ಅಪಾಯಕ್ಕೆ ತಳ್ಳಿರುವ ಭಾರತವನ್ನು ಕಟುವಾಗಿ ಟೀಕಿಸಿರುವ ಸಂಘಟನೆ, ಇದರೊಂದಿಗೆ ಆಫ್ರಿಕ, ಕೆನಡ, ಕೆರಿಬಿಯನ್ ದೇಶಗಳು, ದಕ್ಷಿಣ ಅಮೆರಿಕ ಇತ್ಯಾದಿ ಕಡೆಗಳಿಗೆ ನಕಲಿ ಔಷಧಿಗಳನ್ನು ರಫ್ತು ಮಾಡುವ ಮೂಲಕ ಅಲ್ಲಿನ ಜನರ ಆರೋಗ್ಯದ ಜೊತೆಯೂ ಆಟವಾಡುತ್ತಿದೆ ಎಂದು ದೂರಿದೆ.

ಭಾರತ ಜಗತ್ತಿನ ಮೂರನೇ ಅತೀದೊಡ್ಡ ಔಷಧಿ ಉತ್ಪಾದನಾ ದೇಶವಾಗಿದ್ದು 2020ರ ವೇಳೆಗೆ ಭಾರತದ ಔಷಧಿ ಮಾರುಕಟ್ಟೆ 55 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News