×
Ad

ಬಿಜೆಪಿ ರ‍್ಯಾಲಿಯಲ್ಲಿ ಆಹಾರ ವಿತರಣೆಗೆ ಪೊಲೀಸ್ ವ್ಯಾನ್ ಬಳಕೆ !: ತನಿಖೆಗೆ ಆದೇಶ

Update: 2019-04-27 22:09 IST

ಹೊಸದಿಲ್ಲಿ, ಎ. 28: ಆನಂತನಾಗ್ ಲೋಕಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ರ್ಯಾಲಿಯೊಂದರಲ್ಲಿ ಆಹಾರದ ಪೊಟ್ಟಣಗಳನ್ನು ವಿತರಿಸಲು ಪೊಲೀಸ್ ವಾಹನವೊಂದನ್ನು ಬಳಸಲಾಗಿದೆಯೆಂಬ ವರದಿಗಳ ಬಗ್ಗೆ ಜಮ್ಮುಕಾಶ್ಮೀರ ಪೊಲೀಸರು ಶನಿವಾರ ತನಿಖೆಗೆ ಆದೇಶಿಸಿದ್ದಾರೆ. ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಈ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದರು.

ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆಸಿದ ರೋಡ್‌ಶೋ, ಚುನಾವಣಾ ಆಯೋಗ ನಿಗದಿಪಡಿಸಿದ ವೆಚ್ಚದ ಮಿತಿಯನ್ನು ದಾಟಿದೆಯೆಂದು ಎಎಪಿ ಶನಿವಾರ ಆಪಾದಿಸಿದೆ. ಪ್ರಧಾನಿಯ ರೋಡ್‌ಶೋಗಾಗಿ 1.27 ಕೋಟಿ ರೂ. ವೆಚ್ಚವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ ಚುನಾವಣಾ ನೀತಿಸಂಹಿತೆ ಉಲ್ಲಂಘನೆಯ ಆರೋಪದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಚುನಾವಣಾ ಆಯೋಗ ದಿಲ್ಲಿ ಪೊಲೀಸರಿಗೆ ಸೂಚಿಸಿದೆ. ಎಪ್ರಿಲ್ 25ರಂದು ಗಂಭೀರ್ ಅವರು ಹೊಸದಿಲ್ಲಿಯ ಜುಂಗ್‌ಪುರಪ್ರದೇಶದಲ್ಲಿ ಅನುಮತಿಯ್ಲಿದೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ್ದರು.

 ಉತ್ತರಪ್ರದೇಶದ ರಾಯ್‌ಬರೇಲಿಯಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಅವರು ನಗದು ಅಮಾನ್ಯ ಹಾಗೂ ಜಿಎಸ್‌ಟಿ ಜಾರಿಗಾಗಿ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

 ಪ್ರಧಾನಿ ನರೇಂದ್ರಮೋದಿ ಇಂದು ಉತ್ತರಪ್ರದೇಶದಲ್ಲಿ ಮೂರು ರ್ಯಾಲಿಗಳಲ್ಲಿ ಭಾಷಣ ಮಾಡಿದರು. ಕನೌಜ್‌ನಲ್ಲಿ ನಡೆದ ಮೊದಲ ರ್ಯಾಲಿಯಲ್ಲಿ ಬಿಎಸ್‌ಪಿ-ಎಸ್‌ಪಿ ಮೈತ್ರಿಕೂಟವನ್ನು ಅವರು ಕಟುವಾಗಿ ಟೀಕಿಸಿದರು.

ಒಡಿಶಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಲಿಕಾಪ್ಟರನ್ನು ತಪಾಸಣೆ ನಡೆಸಿದ್ದಕ್ಕಾಗಿ ಅಮಾನತುಗೊಂಡ ಐಎಎಸ್ ಅಧಿಕಾರಿ ಮುಹಮ್ಮದ್ ಅವರು, ತಾನು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲವೆಂದು ಹೇಳಿದ್ದಾರೆ ಹಾಗೂ ತನ್ನ ವಿರುದ್ಧ ಆರೋಪಗಳ ಬಗ್ಗೆ ತನಗೆ ಯಾವುದೇ ಅರಿವಿಲ್ಲವೆಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News