×
Ad

ಇಸ್ಲಾಂ ವಿರೋಧಿ ಪ್ರತಿಭಟನೆ ವೇಳೆ ಈ ಮುಸ್ಲಿಂ ಮಹಿಳೆ ಮಾಡಿದ ಕೆಲಸಕ್ಕೆ ವ್ಯಾಪಕ ಪ್ರಶಂಸೆ

Update: 2019-04-28 14:05 IST

ವಾಷಿಂಗ್ಟನ್, ಎ.28: ಇಸ್ಲಾಂ ವಿರೋಧಿ ಪ್ರತಿಭಟನೆಕಾರರ ಎದುರು ಹಿಜಾಬ್ ಧರಿಸಿದ ಮಹಿಳೆಯೊಬ್ಬರು ಶಾಂತಿಯ ಸಂಕೇತವನ್ನು ಪ್ರದರ್ಶಿಸಿ, ನಗುತ್ತಾ ಫೋಸ್ ನೀಡುತ್ತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರೀತಿ, ಅನುಕಂಪ ಮತ್ತು ಸಹಬಾಳ್ವೆಯ ಸಂದೇಶವನ್ನು ರವಾನಿಸಿದೆ.

24 ವರ್ಷ ವಯಸ್ಸಿನ ಶೈಮಾ ಇಸ್ಮಾಯಿಲ್ ಈ ವಾರಾಂತ್ಯದಲ್ಲಿ ಉತ್ತರ ಅಮೆರಿಕದಲ್ಲಿ ಸಮ್ಮೇಳನವೊಂದಕ್ಕೆ ತೆರಳಿದ್ದರು. ಇಸ್ಲಾಂ ಧರ್ಮವನ್ನು ಪ್ರಚಾರ ಮಾಡುವ ಸಮ್ಮೇಳನ ಪ್ರತಿ ವರ್ಷ ಸಾವಿರಾರು ಮಂದಿಯನ್ನು ಆಕರ್ಷಿಸುತ್ತದೆ.

ಸಮ್ಮೇಳನದ ಪಕ್ಕದಲ್ಲೇ ಇಸ್ಲಾಂ ವಿರೋಧಿ ಪ್ರತಿಭಟನೆ ನಡೆಯುತ್ತಿದ್ದುದು ಅವರ ಗಮನಕ್ಕೆ ಬಂತು. ಅದನ್ನು ನಿರ್ಲಕ್ಷಿಸುವ ಬದಲು ಅಥವಾ ಸಂಘರ್ಷಕ್ಕೆ ಇಳಿಯುವ ಬದಲು, ಶಾಂತಿಯ ಸಂಕೇತವನ್ನು ಪ್ರದರ್ಶಿಸುವ ಮೂಲಕ ಹಾಗೂ ಅವರ ಎದುರು ನಗುತ್ತಾ ಫೋಟೊಗೆ ಫೋಸ್ ನೀಡುವ ಮೂಲಕ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News