ಒಬ್ಬನ ಪ್ರಾಣ ಉಳಿಸಲು ರೈಲನ್ನು 1 ಕಿ.ಮೀ. ಹಿಂದಕ್ಕೆ ಚಲಾಯಿಸಿದ ಚಾಲಕ

Update: 2019-04-28 15:36 GMT

ಹೊಸದಿಲ್ಲಿ, ಎ.28: ಗಾಯಾಳು ಪ್ರಯಾಣಿಕನೊಬ್ಬನ ಪ್ರಾಣ ಉಳಿಸಲು ರೈಲು ಚಾಲಕ ಸುಮಾರು 1 ಕಿ.ಮೀ.ವರೆಗೆ ರೈಲನ್ನು ಹಿಂದಕ್ಕೆ (ರಿವರ್ಸ್) ಚಲಾಯಿಸಿ ಸಮಯಪ್ರಜ್ಞೆ ಮೆರೆದ ಬಗ್ಗೆ ವರದಿಯಾಗಿದೆ.

ಚಲಿಸುತ್ತಿದ್ದ ರೈಲಿನಿಂದ ಬಿದ್ದು ಪ್ರಯಾಣಿಕ ಗಾಯಗೊಂಡಿದ್ದರು. ರಾಜಸ್ಥಾನದ ಜೈಪುರದ ಕೋಟಾ ಬಿನಾದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ರೈಲು ಚಲಿಸುತ್ತಿದ್ದ ಸಂದರ್ಭ 32 ವರ್ಷದ ರಾಜೇಂದ್ರ ಎಂಬವರು ರೈಲಿನಿಂದ ಧುಮುಕಿದ್ದರು. ಇವರು ಮಾನಸಿಕ ಅಸ್ವಸ್ತರಾಗಿದ್ದು, ಅವರನ್ನು ರಕ್ಷಿಸಲು ಅವರ ಹಿಂದೆಯೇ ಸಹೋದರ ವಿನೋದ್ ಎಂಬವರೂ ರೈಲಿನಿಂದ ಹಾರಿದ್ದರು.

“ಮಧ್ಯಪ್ರದೇಶದಲ್ಲಿ ನನ್ನ ಸಂಬಂಧಿಕ ರಾಜೇಂದ್ರ ವರ್ಮಾ ಕೆಲಸ ಮಾಡುತ್ತಿದ್ದಾರೆ. 5 ದಿನಗಳಿಂದ ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ರೈಲು ಬಾರಾನ್ ಜಿಲ್ಲೆಯ ಸಾಲ್ಪುರದಿಂದ ಸಾಗುವಾದ ಅವರು ರೈಲಿನಿಂದ ಹೊರಕ್ಕೆ ಹಾರಿದರು. ಅವರನ್ನು ಹಿಡಿಯಲು ಹೋದ ವಿನೋದ್ ಕೂಡ ಹೊರಕ್ಕೆ ಬಿದ್ದರು” ಎಂದು ರೈಲಿನಲ್ಲಿ ಅವರ ಜೊತೆಗಿದ್ದ ರಾಜೇಂದ್ರ ವರ್ಮಾರ ಸಂಬಂಧಿಯೊಬ್ಬರು ಹೇಳುತ್ತಾರೆ.

“ರಾಜೇಂದ್ರ ರೈಲಿನಿಂದ ಧುಮುಕಿದ ಕೂಡಲೇ ಯಾರೋ ಚೈನು ಎಳೆದಿದ್ದರು. ಸುಮಾರು ದೂರ ಸಾಗಿ ರೈಲು ನಿಂತಿತ್ತು. ರಾಜೇಂದ್ರ ಸಂಬಂಧಿಕರು ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದರು. ಬೇರೆ ದಾರಿಯೇ ಇಲ್ಲದ ಕಾರಣ ಚಾಲಕ ರೈಲನ್ನು ಒಂದು ಕಿ.ಮೀ.ವರೆಗೆ ಹಿಂದಕ್ಕೆ ಚಲಾಯಿಸಿದ್ದರು. ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಯಿತು” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News