ಟಿಎಂಸಿಯ 40 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ: ಪ್ರಧಾನಿ ಮೋದಿ

Update: 2019-04-29 11:03 GMT

ಹೊಸದಿಲ್ಲಿ, ಎ.29: ಟಿಎಂಸಿ ಪಕ್ಷದ ಕನಿಷ್ಠ 40 ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಹೇಳಿಕೊಂಡಿದ್ದಾರೆ.

ಶ್ರೀರಾಮಪುರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಲ್ಲದೆ, ಟಿಎಂಸಿ ಪಕ್ಷದೊಳಗೆ ಭಾರೀ ಬಂಡಾಯ ಭುಗಿಲೇಳಲಿದೆ ಎಂದು ಎಚ್ಚರಿಸಿದ್ದಾರೆ.

‘‘ದೀದಿ, ಬಿಜೆಪಿ ಚುನಾವಣೆಯಲ್ಲಿ ಗೆದ್ದ ಬಳಿಕ ನಿಮ್ಮ ಶಾಸಕರೇ ಬಂಡಾಯ ಏಳಲಿದ್ದಾರೆ. ನಿಮ್ಮ 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ’’ಎಂದು ಬಾಂಬ್ ಸಿಡಿಸಿದರು.

‘‘ಟಿಎಂಸಿ ಮುಖ್ಯಸ್ಥೆ (ಮಮತಾ) ಪಶ್ಚಿಮಬಂಗಾಳದಲ್ಲಿ ಪೊಲೀಸರು ತನ್ನ ಖಾಸಗಿ ಭದ್ರತಾ ಏಜೆನ್ಸಿ ತರಹ ಇರಬೇಕೆಂದು ಬಯಸುತ್ತಾರೆ. ಮತದಾರರಿಗೆ ತಮಗೆ ಇಷ್ಟವಿರುವ ಅಭ್ಯರ್ಥಿಗೆ ಮತ ಹಾಕಲು ಕೆಲವು ಟಿಎಂಸಿ ಗೂಂಡಾಗಳು ತಡೆಯೊಡ್ಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರು ಪ್ರಚಾರ ನಡೆಸಲು ಬಿಡುತ್ತಿಲ್ಲ’’ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News