×
Ad

ಅಮೆರಿಕದಲ್ಲಿ ಸಿಖ್ ಕುಟುಂಬದ ನಾಲ್ವರ ಹತ್ಯೆ

Update: 2019-05-01 10:16 IST

ವಾಷಿಂಗ್ಟನ್, ಮೇ 1: ಸಿನ್ಸಿನಾಟಿಯ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್  ಒಂದರಲ್ಲಿ  ಸಿಖ್ ಕುಟುಂಬದ ಮೂವರು ಮಹಿಳೆಯರು ಸೇರಿದಂತೆ ನಾಲ್ವರನ್ನು ಗುಂಡಿಟ್ಟು ಕೊಲೆಗೈದ  ಘಟನೆ ವರದಿಯಾಗಿದೆ.

 ಹಕೀಕತ್ ಸಿಂಗ್ ಪನಾಗ್ (59), ಅವರ ಪತ್ನಿ ಪರಂಜಿತ್ ಕೌರ್(62), ಮಗಳು ಶಾಲಿಂದರ್ ಕೌರ್ (39), ಅತ್ತಿಗೆ ಅಮ್ರಜಿತ್ ಕೌರ್ (58)ಎಂಬವರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಲೆಗೈದು ಪರಾರಿಯಾಗಿದ್ದಾರೆ.

ನಾಲ್ವರ ಮೃತದೇಹ ರವಿವಾರ ಪತ್ತೆಯಾಗಿದ್ದು, ಅವರ ಮೇಲೆ ದುಷ್ಕರ್ಮಿಗಳು ಹಲವು ಬಾರಿ ಗುಂಡು ಹಾರಿಸಿ ಕೊಲೆಗೈದಿರುವುದುಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ಈ ವರೆಗೂ ಯಾರನ್ನು ಬಂಧಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದು ದ್ವೇಷದ ದಾಳಿಯಲ್ಲ. ಹತ್ಯೆ ಯಾವ ಕಾರಣಕ್ಕಾಗಿ ನಡೆದಿದೆ ಎಂದು ಪೊಲೀಸರು  ತನಿಖೆ ನಡೆಸುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News