×
Ad

ಗುಜರಾತ್ ಬಿಜೆಪಿ ಮುಖ್ಯಸ್ಥ ಜಿತು ವಘಾನಿಗೆ ಚುನಾವಣಾ ಪ್ರಚಾರಕ್ಕೆ 72 ಗಂಟೆಗಳ ನಿಷೇಧ

Update: 2019-05-01 16:48 IST

ಹೊಸದಿಲ್ಲಿ, ಮೇ 1: ಗುಜರಾತ್‌ ಬಿಜೆಪಿ ಘಟಕದ ಅಧ್ಯಕ್ಷ ಜಿತು ವಘಾನಿ ಅವರಿಗೆ  ಚುನಾವಣಾ ಆಯೋಗವು 72 ಗಂಟೆಗಳ ಕಾಲ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗದಂತೆ ನಿಷೇಧ ವಿಧಿಸಿದೆ.

ವಘಾನಿ ಅವರು ಸೂರತ್ ನ ಅಮ್ರೊಲಿಯಲ್ಲಿ ಎ.7ರಂದು ಪಕ್ಷದ ಕಾರ್ಯಕರ್ತರ ಹಾಗೂ ಮತದಾರರ ಸಭೆಯಲ್ಲಿ ತನ್ನ ಭಾಷಣದಲ್ಲಿ ಅಸಹ್ಯ  ಮತ್ತು ನಿಂದನೀಯ ಪದಗಳನ್ನು ಬಳಿಸಿದ ಕಾರಣಕ್ಕಾಗಿ ಅವರಿಗೆ ಪ್ರಚಾರಕ್ಕೆ ನಿಷೇಧ ವಿಧಿಸಲಾಗಿದೆ. ಮೇ 2  ಸಂಜೆ 4ಗಂಟೆಯಿಂದ ನಿಷೇಧ ಜಾರಿಗೆ ಬರಲಿದೆ. ಈ ಅವಧಿಯಲ್ಲಿ ವಘಾನಿಗೆ ದೇಶದ ಯಾವುದೇ ಭಾಗದಲ್ಲಿ ಸಾರ್ವಜನಿಕ ಸಭೆ, ರ್ಯಾಲಿ, ರೋಡ್ ಶೋದಲ್ಲಿ ಭಾಗವಹಿಸಿ ಮಾತನಾಡುವಂತಿಲ್ಲ. 

 ಗುಜರಾತ್ ನಲ್ಲಿ ಲೋಕಸಭಾ ಚುನಾವಣೆಯ ಮತದಾನ   ಎಪ್ರಿಲ್ 23ರಂದು ನಡೆದಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News