ಎಸೆಸೆಲ್ಸಿ ಫಲಿತಾಂಶ: ಉಡುಪಿಯಲ್ಲಿ ಬಾಲಕಿಯರ ಮೇಲುಗೈ

Update: 2019-05-02 14:26 GMT

ಉಡುಪಿ, ಮೇ2: ಶನಿವಾರ ಪ್ರಕಟಗೊಂಡ ಈ ಬಾರಿಯ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯ ಬಾಲಕಿಯರು ಬಾಲಕರಿಗಿಂತ ಅಧಿಕ ಸಂಖ್ಯೆಯಲ್ಲಿ ತೇರ್ಗಡೆಗೊಂಡು ಮೇಲುಗೈ ಪಡೆದಿದ್ದಾರೆ. ಪರೀಕ್ಷೆ ಬರೆದ ಶೇ.91.13ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದರೆ, ಶೇ.85.10 ಬಾಲಕರು ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾರೆ.

ವಿಷಯವಾರು ಫಲಿತಾಂಶ: ಜಿಲ್ಲೆಯಲ್ಲಿ ಪ್ರಥಮ ಭಾಷೆಯಲ್ಲಿ ಶೇ.98.66, ದ್ವಿತೀಯ ಭಾಷೆಯಲ್ಲಿ ಶೇ.97.06, ತೃತೀಯ ಭಾಷೆಯಲ್ಲಿ ಶೇ.96.83, ಗಣಿತದಲ್ಲಿ ಶೇ.91.18,ವಿಜ್ಞಾನದಲ್ಲಿ ಶೇ.94.38 ಹಾಗೂ ಸಮಾಜ ವಿಜ್ಞಾನ ದಲ್ಲಿ ಶೇ.94.10 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಲಯವಾರು ಫಲಿತಾಂಶ: ಜಿಲ್ಲೆಯ ಒಟ್ಟು ಐದು ವಲಯಗಳಲ್ಲಿ ಕುಂದಾಪುರ ವಲಯ ಈ ಬಾರಿ ಅತ್ಯುತ್ತಮ ಸಾಧನೆ ತೋರಿದೆ. ಕುಂದಾಪುರದ ವಿದ್ಯಾರ್ಥಿಗಳು ಅತ್ಯಧಿಕ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದರೆ, ನಂತರದ ಸ್ಥಾನ ಕಾರ್ಕಳ ವಲಯದ್ದು. ಬ್ರಹ್ಮಾವರ ವಲಯ ಮೂರನೇ ಸ್ಥಾನದಲ್ಲಿದೆ.

ಕುಂದಾಪುರ ವಲಯದಲ್ಲಿ ಒಟ್ಟು 2294 ವಿದ್ಯಾರ್ಥಿಗಳಲ್ಲಿ 2086 ಮಂದಿ ತೇರ್ಗಡೆಗೊಂಡು ಶೇ.90.93, ಕಾರ್ಕಳ ವಲಯದಲ್ಲಿ 2667 ವಿದ್ಯಾರ್ಥಿಗಳಲ್ಲಿ 2364 ಮಂದಿ ತೇರ್ಗಡೆಗೊಂಡು ಶೇ.88.63, ಬ್ರಹ್ಮಾವರ ವಲಯದಲ್ಲಿ 2766 ವಿದ್ಯಾರ್ಥಿಗಳಲ್ಲಿ 2445 ಮಂದಿ ತೇರ್ಗಡೆಗೊಂಡು ಶೇ.88.39, ಉಡುಪಿ ವಲಯದಲ್ಲಿ 3375 ವಿದ್ಯಾರ್ಥಿಗಳಲ್ಲಿ 2890 ಮಂದಿ ಪಾಸಾಗಿ ಶೇ.85.62 ಹಾಗೂ ಬೈಂದೂರು ವಲಯದಲ್ಲಿ 1901 ಮಂದಿ ವಿದ್ಯಾರ್ಥಿಗಳಲ್ಲಿ 1672 ಮಂದಿ ತೇರ್ಗಡೆಗೊಂಡು ಶೇ.87.95 ಫಲಿತಾಂಶ ಬಂದಿದೆ.

ಪ್ರತಿ ಭಾಷೆಯಲ್ಲಿ ಶೇ.100 ಅಂಕ ಪಡೆದವರು: ಪ್ರಥಮ ಭಾಷೆಯಲ್ಲಿ 183 ಮಂದಿ, ದ್ವಿತೀಯ ಭಾಷೆಯಲ್ಲಿ 88 ಮಂದಿ, ತೃತೀಯ ಭಾಷೆಯಲ್ಲಿ 238 ಮಂದಿ, ಗಣಿತದಲ್ಲಿ 68 ಮಂದಿ, ವಿಜ್ಞಾನದಲ್ಲಿ 18 ಮಂದಿ ಹಾಗೂ ಸಮಾಜ ವಿಜ್ಞಾನದಲ್ಲಿ 35 ಮಂದಿ ಅತಿ ಹೆಚ್ಚು ಅಂಕ ಗಳಿಸಿದ್ದಾರೆ.

ಜಾತಿವಾರು ಫಲಿತಾಂಶ: ಜಿಲ್ಲೆಯಲ್ಲಿ ಪರೀಕ್ಷೆ ಬರೆದ ಒಟ್ಟು 1027 ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಲ್ಲಿ 802 ಮಂದಿ ತೇರ್ಗಡೆಗೊಂಡಿದ್ದು ಶೇ.78.09 ಫಲಿತಾಂಶ ಬಂದಿದೆ. ಪರಿಶಿಷ್ಟ ಪಂಗಡದ 713 ವಿದ್ಯಾರ್ಥಿಗಳಲ್ಲಿ 582 ಮಂದಿ ತೇರ್ಗಡೆಗೊಂಡು ಶೇ.81.63 ಫಲಿತಾಂಶ ದಾಖಲಾಗಿದೆ. ಇನ್ನುಳಿದಂತೆ ಪ್ರವರ್ಗ-1ರಲ್ಲಿ ಶೇ.87.24, 2ಎಯಲ್ಲಿ ಶೇ.89.66, 2ಬಿಯಲ್ಲಿ ಶೇ.83.92, 3ಎಯಲ್ಲಿ 86.03, 3ಬಿಯಲ್ಲಿ ಶೇ.93.11 ಹಾಗೂ ಇತರೆ ಶೇ.94.11 ಉತ್ತೀರ್ಣತೆ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News