90 ಮಂದಿಗೆ ಎಚ್‌ಐವಿ ಸೋಂಕಿತ ಸೂಜಿ ಚುಚ್ಚಿದ ವೈದ್ಯ

Update: 2019-05-03 13:47 GMT

ಕರಾಚಿ, ಮೇ 3: ಪಾಕಿಸ್ತಾನದಲ್ಲಿ ವೈದ್ಯನೊಬ್ಬ ಕಲುಷಿತ ಸಿರಿಂಜ್ ಬಳಸಿ 65 ಮಕ್ಕಳು ಸೇರಿದಂತೆ ಕನಿಷ್ಠ 90 ಮಂದಿಗೆ ಎಚ್‌ಐವಿ ವೈರಸ್‌ನ ಸೋಂಕನ್ನು ಹರಡಿದ್ದಾನೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

‘‘ಆರೋಗ್ಯ ಅಧಿಕಾರಿಗಳಿಂದ ದೂರುಗಳನ್ನು ಪಡೆದ ಬಳಿಕ ನಾವು ವೈದ್ಯನೊಬ್ಬನನ್ನು ಬಂಧಿಸಿದ್ದೇವೆ’’ ಎಂದು ದಕ್ಷಿಣದ ನಗರ ಲರ್ಕಾನದಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘‘ಆ ವೈದ್ಯನೂ ಎಚ್‌ಐವಿ ಪೀಡಿತ ಎಂಬ ಮಾಹಿತಿ ಲಭಿಸಿದೆ’’ ಎಂದರು. ಎಚ್‌ಐವಿ ವೈರಸ್ ಏಡ್ಸ್ ಕಾಯಿಲೆಗೆ ಕಾರಣವಾಗುತ್ತದೆ.

ಲರ್ಕಾನ ನಗರದ ಹೊರವಲಯದಲ್ಲಿ 18 ಮಕ್ಕಳಲ್ಲಿ ಎಚ್‌ಐವಿ ವೈರಸ್ ಇರುವುದು ಪತ್ತೆಯಾದ ಬಳಿಕ, ಕಳೆದ ವಾರ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತರಲಾಯಿತು. ಈ ಹಿನ್ನೆಲೆಯಲ್ಲಿ, ಅಧಿಕಾರಿಗಳು ವಿಸ್ತೃತ ತಪಾಸಣೆ ನಡೆಸಿದರು.

ಆಗ ಇನ್ನೂ ಹಲವು ಪ್ರಕರಣಗಳು ಪತ್ತೆಯಾದವು.

ತನಿಖೆಯಲ್ಲಿ ಓರ್ವ ವೈದ್ಯನು ಕಲುಷಿತ ಸಿರಿಂಜನ್ನು ತನ್ನ ರೋಗಿಗಳ ಮೇಲೆ ಬಳಸುವುದು ಪತ್ತೆಯಾಯಿತು ಎಂದು ಅಧಿಕಾರಿಗಳು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News