×
Ad

ಜಾರ್ಖಂಡ್: ಶಂಕಿತ ನಕ್ಸಲ್‌ರಿಂದ ಐಇಡಿ ಸ್ಫೋಟ, ಬಿಜೆಪಿ ಕಚೇರಿಗೆ ಹಾನಿ

Update: 2019-05-03 20:02 IST

ಜಮ್ಷೆಡ್‌ಪುರ,ಮೇ 3: ಜಾರ್ಖಂಡ್‌ನ ಸರಾಯ್‌ಕೇಲಾ-ಖರ್ಸ್ವಾಂ ಜಿಲ್ಲೆಯಲ್ಲಿ ಶುಕ್ರವಾರ ನಸುಕಿನಲ್ಲಿ ಶಂಕಿತ ನಕ್ಸಲರು ಐಇಡಿ ಸ್ಫೋಟಿಸಿದ್ದು,ಸ್ಥಳಿಯ ಬಿಜೆಪಿ ಕಚೇರಿಯು ಭಾಗಶಃ ಹಾನಿಗೀಡಾಗಿದೆ. ಸ್ಫೋಟದಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಪೊಲೀಸರು ತಿಳಿಸಿದರು.

ಖರ್ಸ್ವಾಂ ಬಿಜೆಪಿ ಕಚೇರಿಗೆ ಆಗಮಿಸಿದ ನಾಲ್ವರು ಶಸ್ತ್ರಸಜ್ಜಿತ ವ್ಯಕ್ತಿಗಳು ಅಲ್ಲಿ ಮಲಗಿದ್ದ 2-3 ಜನರನ್ನು ಹೊರಗೆಳೆದು ಬಾಂಬ್ ಸ್ಫೋಟಿಸಿದ್ದಾರೆ. ಸ್ಫೋಟದ ರೀತಿಯನ್ನು ಗಮನಿಸಿದರೆ ಇದರಲ್ಲಿ ನಕ್ಸಲರು ಭಾಗಿಯಾಗಿರುವಂತಿದೆ ಎಂದು ಎಸ್‌ಪಿ ಚಂದನಕುಮಾರ ಸಿನ್ಹಾ ತಿಳಿಸಿದರು.

ಸರಾಯ್‌ಕೇಲಾ-ಖರ್ಸ್ವಾಂ ಮಾಜಿ ಜಾರ್ಖಂಡ್ ಮುಖ್ಯಮಂತ್ರಿ ಅರ್ಜುನ ಮುಂಡಾ ಅವರು ಸ್ಪರ್ಧಿಸಿರುವ ಖುಂಟಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು,ಇಲ್ಲಿ ಮೇ 6ರಂದು ಮತದಾನ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News