ಫನಿ ಚಂಡಮಾರುತ: ಅಮಿತ್ ಶಾ ಚುನಾವಣಾ ರ್ಯಾಲಿ ರದ್ದು

Update: 2019-05-03 16:29 GMT

ರಾಂಚಿ, ಮೇ 3: ನೆರೆಯ ರಾಜ್ಯ ಒಡಿಶಾದ ಕರಾವಳಿಯಲ್ಲಿ ಫನಿ ಚಂಡಮಾರುತ ಭಾರೀ ಅವಾಂತರ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಜಾರ್ಖಂಡ್‌ನ ರಾಂಚಿಯಲ್ಲಿ ಶುಕ್ರವಾರ ನಡೆಸಬೇಕಿದ್ದ ಚುನಾವಣಾ ಪ್ರಚಾರ ರ್ಯಾಲಿಯನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ರದ್ದುಗೊಳಿಸಿದ್ದಾರೆ. ಕೊದೆರ್ಮ, ಖುಂತಿ ಮತ್ತು ರಾಂಚಿಯಲ್ಲಿ ಅಮಿತ್ ಶಾ ನಡೆಸಬೇಕಿದ್ದ ಚುನಾವಣಾ ಪ್ರಚಾರ ರ್ಯಾಲಿಗಳನ್ನು ರದ್ದುಗೊಳಿಸಲಾಗಿದೆ. ಆದರೆ ಜಾರ್ಖಂಡ್ ಮುಖ್ಯಮಂತ್ರಿ ರಘುಬರ ದಾಸ್, ಬಿಹಾರ ಆರೋಗ್ಯ ಸಚಿವ ಮಂಗಲ್ ಪಾಂಡೆ ಮತ್ತು ಎಜೆಎಸ್‌ಯು ಪಕ್ಷದ ಅಧ್ಯಕ್ಷ ಸುದೇಶ್ ಮಹತೊ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಪಾಲ್ಗೊಂಡರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಖುಂತಿ ಸಂಸದೀಯ ಕ್ಷೇತ್ರದಲ್ಲಿ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾ ಬಿಜೆಪಿ ಅಭ್ಯರ್ಥಿಯಾಗಿದ್ದರೆ ಕಾಂಗ್ರೆಸ್‌ನಿಂದ ಕಾಳಿಚರಣ್ ಮುಂಡಾ ಕಣಕ್ಕಿಳಿದಿದ್ದಾರೆ. ರಾಂಚಿಯಲ್ಲಿ ಬಿಜೆಪಿ ಅಭ್ಯರ್ಥಿ ಸಂಜಯ್ ಸೇಠ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಕೇಂದ್ರ ಸಚಿವ ಸುಬೋಧ್‌ಕಾಂತ್ ಸಹಾಯ್ ಮಧ್ಯೆ ಸ್ಪರ್ಧೆಯಿದೆ. ಕೊದೆರ್ಮದಲ್ಲಿ ಬಿಜೆಪಿಯಿಂದ ಅನ್ನಪೂರ್ಣ ದೇವಿಗೆ ಜಾರ್ಖಂಡ್ ವಿಕಾಸ್ ಮೋರ್ಛಾದ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಬಾಬೂಲಾಲ್ ಮರಾಂಡಿ ಇದಿರಾಳಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News