ಇಸ್ರೋದ ಮಾಜಿ ಅಧ್ಯಕ್ಷ ಕಿರಣ್‌ಕುಮಾರ್‌ಗೆ ಫ್ರಾನ್ಸ್‌ನ ಪರಮೋನ್ನತ ನಾಗರಿಕ ಗೌರವ

Update: 2019-05-03 17:46 GMT

ಹೊಸದಿಲ್ಲಿ,ಮೇ 4: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಅವರಿಗೆ ಫ್ರಾನ್ಸ್‌ನ ಪರಮೋನ್ನತ ನಾಗರಿಕ ಗೌರವ ಪುರಸ್ಕಾರ ಲಭಿಸಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ-ಫ್ರಾನ್ಸ್ ಸಹಕಾರಕ್ಕಾಗಿ ನೀಡಿದ ಕೊಡುಗೆಗಾಗಿ ಅವರಿಗೆ ‘ಚೇವಲಿಯರ್ ಆಫ್ ಆರ್ಡರ್ ಆಫ್ ದಿ ಲಿಜಿಯನ್ ಆಫ್ ಹಾನರ್’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ದಿಲ್ಲಿಯಲ್ಲಿರುವ ಫ್ರಾನ್ಸ್ ಭವನದಲ್ಲಿ ಇಂದು ನಡೆದ ವಿಶೇಷ ಸಮಾರಂಭದಲ್ಲಿ ಕಿರಣ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನಿಸಲಾಯಿತು. ಭಾರತದಲ್ಲಿನ ಫ್ರಾನ್ಸ್ ರಾಯಭಾರಿ ಅಲೆಕ್ಸಾಂಡರ್ ಝಿಗ್ಲೆರ್ ಅವರು ಡಾ. ಕಿರಣ್‌ಕುಮಾರ್‌ಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನಿಸಿದರು. ಫ್ರಾನ್ಸ್ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ಜೀನ್-ಯಿವೆಸ್ ಲಿ ಗಾಲ್ ಉಪಸ್ಥಿತರಿದ್ದರು.

ಡಾ.ಕಿರಣ್ ಕುಮಾರ್ ಅವರ ನಾಯಕತ್ವದಲ್ಲಿ ನಮ್ಮ ಎರಡು ದೇಶಗಳೂ ಬಾಹ್ಯಾಕಾಶ ನೌಕೆ ಉಡಾವಣಾ ತಂತ್ರಜ್ಞಾನ. ಭೂವೀಕ್ಷಣೆ, ಸಂವಹನ ಹಾಗೂ ನೇವಿಗೇಶನ್ ಉಪಗ್ರಹಗಳ ಕ್ಷೇತ್ರಗಳಲ್ಲಿ ಕೈಜೋಡಿಸಿದ್ದವು ಎಂದು ಝಿಗ್ಲೆರ್ ಟ್ವಿಟೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News