ಮೋದಿ ಸರಕಾರಕ್ಕೂ ಮೊದಲು ಹಲವು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿವೆ: 'ಸರ್ಜಿಕಲ್ ಸ್ಟ್ರೈಕ್ ಹೀರೋ' ಜ.ಹೂಡಾ

Update: 2019-05-04 14:40 GMT

ಹೊಸದಿಲ್ಲಿ, ಮೇ 4: ಯುಪಿಎ ಆಡಳಿತಾವಧಿಯಲ್ಲೂ ಭಾರತೀಯ ಸೇನೆಯು ಉಗ್ರರ ವಿರುದ್ಧ ಗಡಿಯಾಚೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂದು ‘ಸರ್ಜಿಕಲ್ ಸ್ಟ್ರೈಕ್ ಹೀರೋ’ ಲೆ.ಜ. ಹೂಡಾ ತಿಳಿಸಿದ್ದಾರೆ.

ಮೋದಿ ನೇತೃತ್ವದ ಸರಕಾರ ಪ್ರಪ್ರಥಮ ಬಾರಿಗೆ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎನ್ನುವ ಬಿಜೆಪಿ ಪ್ರತಿಪಾದನೆಯ ನಂತರ ಅವರು ಈ ಹೇಳಿಕೆ ನೀಡಿದ್ದಾಗಿ ಎಎನ್ ಐ ವರದಿ ಮಾಡಿದೆ.

2004ರಿಂದ 2014ರವರೆಗೆ ಮನಮೋಹನ್ ಸಿಂಗ್ ಸರಕಾರದಡಿ 6 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು. ಆದರೆ ಈ ವಿಚಾರವನ್ನು ಪ್ರಚಾರ ಮಾಡಿರಲಿಲ್ಲ ಎನ್ನುವ ಕಾಂಗ್ರೆಸ್ ಪ್ರತಿಪಾದನೆಗೆ ಜ. ಹೂಡಾ ಹೇಳಿಕೆಯಿಂದ ಬಲ ಬಂದಂತಾಗಿದೆ.

“ನಿವೃತ್ತ ಸೇನಾಧಿಕಾರಿಗಳು ಮತ್ತು ಹಲವರು ಹೇಳುವಂತೆ ಸರ್ಜಿಕಲ್ ಸ್ಟ್ರೈಕ್ ಗಳು ಈ ಮೊದಲೂ ನಡೆದಿತ್ತು. ಆದರೆ ಸರಿಯಾದ ದಿನಾಂಕದ ಬಗ್ಗೆ ನನಗೆ ತಿಳಿದಿಲ್ಲ” ಎಂದು ಹೂಡಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News