ಚೀನಾದ 10 ಲಕ್ಷ ಮುಸ್ಲಿಮರು ‘ಯಾತನಾ ಶಿಬಿರ’ಗಳಲ್ಲಿ: ಅಮೆರಿಕ

Update: 2019-05-04 15:41 GMT
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್, ಮೇ 4: ಚೀನಾವು 10 ಲಕ್ಷಕ್ಕೂ ಅಧಿಕ ಮುಸ್ಲಿಮರನ್ನು ‘ಯಾತನಾ ಶಿಬಿರ’ (ಕಾನ್ಸಂಟ್ರೇಶನ್ ಕ್ಯಾಂಪ್)ಗಳಲ್ಲಿ ಇರಿಸಿದೆ ಎಂದು ಅಮೆರಿಕ ಶುಕ್ರವಾರ ಆರೋಪಿಸಿದೆ.

ಅಮೆರಿಕದ ರಕ್ಷಣಾ ಇಲಾಖೆಯಲ್ಲಿ ಏಶ್ಯ ನೀತಿ ವಿಭಾಗದ ಮುಖ್ಯಸ್ಥರಾಗಿರುವ ರ್ಯಾಂಡಲ್ ಶ್ರೈವರ್ ನೀಡಿರುವ ಈ ಹೇಳಿಕೆಯು ಅಮೆರಿಕ ಮತ್ತು ಚೀನಾ ನಡುವಿನ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

ಚೀನಾವು ಮುಸ್ಲಿಮ್ ಉಯಿಘರ್ ಅಲ್ಪಸಂಖ್ಯಾತ ಗುಂಪುಗಳು ಹಾಗೂ ಇತರ ಮುಸ್ಲಿಮ್ ಗುಂಪುಗಳ ಸದಸ್ಯರನ್ನು ಭಾರೀ ಪ್ರಮಾಣದಲ್ಲಿ ಬಂಧನ ಶಿಬಿರಗಳಲ್ಲಿ ಇರಿಸಿದೆ. ಆದರೆ, ಈ ಶಿಬಿರಗಳು ಉದ್ಯೋಗ ತರಬೇತಿ ಕೇಂದ್ರಗಳು ಎಂಬುದಾಗಿ ಚೀನಾ ಹೇಳಿಕೊಳ್ಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News