×
Ad

ಆಂಧ್ರಪ್ರದೇಶದಲ್ಲಿ ಬಿಸಿಗಾಳಿ

Update: 2019-05-05 22:55 IST

ಅಮರಾವತಿ, ಮೇ 5: ಫನಿ ಚಂಡಮಾರುತದ ಪರಿಣಾಮ ಆಂಧ್ರಪ್ರದೇಶದಲ್ಲಿ ಮೂರು ದಿನಗಳ ಕಾಲ ಬಿಸಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ರವಿವಾರ ಮುನ್ಸೂಚನೆ ನೀಡಿದೆ.

ಫನಿ ಚಂಡಮಾರುತದಿಂದ ಆಂಧ್ರಪ್ರದೇಶದ ಕರಾವಳಿ ತೀರದ ಜಿಲ್ಲೆಗಳಲ್ಲಿ ತೇವಾಂಶದ ಕೊರತೆ ಉಂಟಾಗಿರುವುದಲ್ಲದೆ, ಉಷ್ಣಾಂಶ ಗಣನೀಯವಾಗಿ ಏರಿಕೆಯಾಗಿದೆ. ಇದುದರಿಂದ ಎರಡು-ಮೂರು ದಿನಗಳ ಕಾಲ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ.

 ಕೃಷ್ಣ, ಗುಂಟೂರು, ಪ್ರಕಾಶಂ, ನೆಲ್ಲೂರು, ಕಡಪ, ಕರ್ನೂಲ್, ಚಿತ್ತೂರು ವಿಶಾಖಪಟ್ಟಣಂ ಹಾಗೂ ಕರಾವಳಿಯ ಕೆಲವು ಭಾಗಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 ಬಿಸಿಗಾಳಿಯಿಂದ ಉಷ್ಣಾಂಶ ತೀವ್ರ ಹೆಚ್ಚಾಗಲಿದ್ದು, ಸೆಕೆಯ ಅನುಭವ ಆಗಲಿದೆ. ಬಿಸಿ ಗಾಳಿ ಬೀಸುವ ಹಿನ್ನೆಲೆಯಲ್ಲಿ ಮಧ್ಯಾಹ 12ರಿಂದು 3 ಗಂಟೆ ಅವಧಿಯೊಳಗೆ ಬಿಸಿಲಿಗೆ ಓಡಾಡದಂತೆ ರಾಜ್ಯ ಸರಕಾರ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News