×
Ad

ಫನಿ ಚಂಡಮಾರುತ ಹಾನಿಯ ಸಮೀಕ್ಷೆಗೆ ಪ್ರಧಾನಿ ಮೋದಿಗೆ ಅವಕಾಶ ನೀಡದ ಮಮತಾ ಬ್ಯಾನರ್ಜಿ

Update: 2019-05-06 12:06 IST

ಕೋಲ್ಕತಾ, ಮೇ 6:ಪಶ್ಚಿಮ ಬಂಗಾಳದಲ್ಲಿ  ಫನಿ ಚಂಡಮಾರುತದಿಂದ ಹಾನಿಯಾದ ಪ್ರದೇಶಗಳ ವೈಮಾನಿಕ ಸಮೀಕ್ಷೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಅಲ್ಲಿನ ಸರಕಾರ ಅವಕಾಶ ನೀಡಿಲ್ಲ.

ಪ್ರಧಾನ ಮಂತ್ರಿಗೆ ವೈಮಾನಿಕ ಸಮೀಕ್ಷೆ ಮತ್ತು ಸಭೆ ನಡೆಸಲು ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಿಸಿದ್ದಾರೆ.

ಒಡಿಶಾದಲ್ಲಿ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ ಒಂದು ಸಾವಿರ  ಕೋಟಿ ನರೂ.  ಹೆಚ್ಚುವರಿ ಪರಿಹಾರ ಹಣ ಘೋಷಿಸಿದ್ದಾರೆ. ಒಡಿಶಾ ಸರಕಾರದ ಪ್ರತಿಯೊಂದು ಹೆಜ್ಜೆಯಲ್ಲೂ ಕೇಂದ್ರ ಸರಕಾರ ಇದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News