×
Ad

ಪ್ರಸಿದ್ಧ ‘ಮಾಪಿಳ್ಳೆ’ ಗಾಯಕ ಎರ್ಞೋಳಿ ಮೂಸಾ ಇನ್ನಿಲ್ಲ

Update: 2019-05-06 17:45 IST

ಕೊಚ್ಚಿ, ಮೇ 6: ಪ್ರಸಿದ್ಧ ‘ಮಾಪಿಳ್ಳೆ’ ಗಾಯಕ ಎರ್ಞೋಳಿ ಮೂಸಾ ಸೋಮವಾರ ತಲಶ್ಶೇರಿಯಲ್ಲಿರುವ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಮಾಪಿಳ್ಳೆ ಹಾಡುಗಳಿಂದ ಪ್ರಸಿದ್ಧರಾಗಿದ್ದ ಅವರು ಭಾರತ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಸುಮಾರು 300ಕ್ಕೂ ಅಧಿಕ ಶೋಗಳನ್ನು ಅವರು ಗಲ್ಫ್ ನಲ್ಲಿ ನಡೆಸಿದ್ದಾರೆ.

ಮೂಸಾ ಅವರ ಪ್ರಸಿದ್ಧ ಹಾಡು ‘ಮಾಣಿಕ್ಯಾ ಮಲರಾಯ’ ಹಾಡನ್ನು ಇಂದಿಗೂ ಸಂಗೀತಪ್ರಿಯರು ಗುನುಗುತ್ತಾರೆ. ಇತ್ತೀಚೆಗೆ ಬಿಡುಗಡೆಯಾದ ‘ಒರು ಅಡಾರ್ ಲವ್’ ಚಿತ್ರದಲ್ಲಿ ಈ ಹಾಡನ್ನು ಬಳಸಲಾಗಿತ್ತು.

ಮೂಸಾ ಅವರ ನಿಧನಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದು, ಮಾಪಿಳ್ಳೆ ಹಾಡುಗಳ ಪ್ರಸಿದ್ಧಿಗೆ ಅವರ ಕೊಡುಗೆ ಅಪಾರ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News