‘ಮೋದಿ-ಮೋದಿ’ ಎಂದು ಮನೆಬಾಗಿಲು ತೆರೆಸಿ ಲಕ್ಷಾಂತರ ರೂ. ದೋಚಿದ ಡಕಾಯಿತರು

Update: 2019-05-08 16:30 GMT

ಸಿವಾನ್(ಬಿಹಾರ),ಮೇ 8: ವಿಲಕ್ಷಣ ಡಕಾಯಿತಿ ಘಟನೆಯೊಂದರಲ್ಲಿ ಬಲಿಪಶುಗಳು ತಮ್ಮ ಮನೆಬಾಗಿಲುಗಳನ್ನು ತೆರೆಯಲು ಲೂಟಿಕೋರರು ‘ಮೋದಿ-ಮೋದಿ’ ಘೋಷಣೆಗಳನ್ನು ಕೂಗಿದ್ದಾರೆ. ಅಮಾಯಕರು ಬಾಗಿಲು ತೆರೆದ ತಕ್ಷಣ ಒಳನುಗ್ಗಿದ ಡಕಾಯಿತರು ಲಕ್ಷಾಂತರ ರೂ.ಗಳ ಸೊತ್ತುಗಳನ್ನು ದೋಚಿದ್ದಾರೆ,ಮನೆಯವರು ಪ್ರತಿರೋಧಿಸಿದಾಗ ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸಿವಾನ್ ಪೊಲೀಸ್ ಠಾಣೆಯ ಸಮೀಪದ ಘುರ್ಘಾಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಉಪೇಂದ್ರ ರಾಜ್ ಎನ್ನುವವರ ಮನೆಯ ಬಳಿ ಬಂದಿದ್ದ ಡಕಾಯಿತರು ‘ಮೋದಿ-ಮೋದಿ ’ ಎಂದು ಕೂಗಿದ್ದರು. ಇದನ್ನು ಕೇಳಿದ ಮನೆಮಂದಿ ಬಿಜೆಪಿಯವರು ಮತ ಕೇಳಲು ಬಂದಿದ್ದಾರೆ ಎಂದು ಭಾವಿಸಿ ಬಾಗಿಲು ತೆರೆದಿದ್ದರು. ಆದರೆ ಡಕಾಯಿತರು ಮನೆಯೊಳಗೆ ನುಗ್ಗಿದಾಗ ಆಘಾತಗೊಂಡಿದ್ದರು. ಚೇತರಿಸಿಕೊಂಡು ಪ್ರತಿರೋಧಿಸಿದಾಗ ಡಕಾಯಿತರು ಅವರನ್ನು ಥಳಿಸಿದ್ದು,ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಳಿಕ ಲಕ್ಷಾಂತರ ರೂ.ಗಳ ಸೊತ್ತುಗಳೊಂದಿಗೆ ಪರಾರಿಯಾಗಿದ್ದಾರೆ.

ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News