ಬಿಜೆಪಿ ಎಂದಿಗೂ ‘ಮೋದಿ-ಶಾ’ ಪಕ್ಷವಾಗಲು ಸಾಧ್ಯವಿಲ್ಲ: ನಿತಿನ್ ಗಡ್ಕರಿ

Update: 2019-05-10 12:51 GMT

ಹೊಸದಿಲ್ಲಿ, ಮೇ 10: “ಬಿಜೆಪಿಯು ಸಿದ್ಧಾಂತಗಳನ್ನು ಆಧರಿಸಿದ್ದು, ಎಂದಿಗೂ ಮೋದಿ-ಶಾ ಪಕ್ಷವಾಗಲು ಸಾಧ್ಯವಿಲ್ಲ” ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಬಿಜೆಪಿಯು ‘ಮೋದಿ-ಕೇಂದ್ರಿತ’ವಾಗಿದೆ ಎನ್ನುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, “ಈ ಹಿಂದೆ ಪಕ್ಷವು ಎಂದಿಗೂ ಅಟಲ್ ಜೀ ಅಥವಾ ಅಡ್ವಾಣಿಯವರ ಪಕ್ಷವಾಗಿರಲಿಲ್ಲ. ಹಾಗಾಗಿ ಅಮಿತ್ ಶಾ ಅಥವಾ ನರೇಂದ್ರ ಮೋದಿಯವರ ಪಕ್ಷವಾಗಲೂ ಸಾಧ್ಯವಿಲ್ಲ” ಎಂದರು.

ಈ ಬಾರಿಯ ಚುನಾವಣೆಯಲ್ಲಿ ಪಕ್ಷವು ಕಳೆದ ಬಾರಿಗಿಂತ ಹೆಚ್ಚು ಸೀಟುಗಳನ್ನು ಗೆಲ್ಲಲಿದೆ ಎಂದು ಅವರು ಈ ಸಂದರ್ಭ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News