ಶೌಚಗುಂಡಿಗೆ ಇಳಿದ ಮೂವರು ಕಾರ್ಮಿಕರ ಸಾವು

Update: 2019-05-10 13:09 GMT

ಥಾಣೆ, ಮೇ 10: ಶೌಚಗುಂಡಿಯನ್ನು ಸ್ವಚ್ಛಗೊಳಿಸಲು ಒಳಗಿಳಿದ ಮೂವರು ಕಾರ್ಮಿಕರು ವಿಷಕಾರಿ ಗಾಳಿ ಸೇವಿಸಿ ಮೃತಪಟ್ಟ ಘಟನೆ ಥಾಣೆಯ ಧೋಕಾಲಿ ಎಂಬಲ್ಲಿ ಶುಕ್ರವಾರ ನಡೆದಿದೆ. ತೀವ್ರ ಅಸ್ವಸ್ಥರಾದ ಇತರ ಐದು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಧೋಕಾಲಿಯಲ್ಲಿರುವ ವಸತಿ ಸಮುಚ್ಛಯದಲ್ಲಿ ಶೌಚಗುಂಡಿಯನ್ನು ಸ್ವಚ್ಛಗೊಳಿಸಲು 11 ಕಾರ್ಮಿಕರು ಗುಂಡಿಯ ಒಳಗೆ ಇಳಿದಿದ್ದರು. ಈ ಸಂದರ್ಭ ವಿಷಗಾಳಿಯ ಪ್ರಭಾವಕ್ಕೊಳಗಾಗಿ ಮೂವರು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಅಮಿತ್ ಪುಹಾಲ್( 20 ವರ್ಷ), ಅಮನ್ ಬಾದಲ್(21 ವರ್ಷ) ಹಾಗೂ ಅಜಯ್ ಬುಂಬಕ್(24 ವರ್ಷ) ಎಂದು ಗುರುತಿಸಲಾಗಿದೆ. ಶೌಚಗುಂಡಿಯೊಳಗೆ ಇಳಿದಿದ್ದ ಇತರ ಎಂಟು ಕಾರ್ಮಿಕರೂ ಅಸ್ವಸ್ಥರಾಗಿದ್ದು ಅವರನ್ನು ತಕ್ಷಣ ಮೇಲೆತ್ತಲಾಗಿದೆ. ತೀವ್ರ ಅಸ್ವಸ್ಥರಾಗಿದ್ದ ಐದು ಮಂದಿಯನ್ನು ಮೆಟ್ರೊ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ದಿಲ್ಲಿಯಲ್ಲೂ ಇದೇ ರೀತಿಯ ದುರಂತ ಸಂಭವಿಸಿತ್ತು. ವಾಯುವ್ಯ ದಿಲ್ಲಿಯ ಮನೆಯೊಂದರ ಶೌಚಗುಂಡಿಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು ಇತರ ಮೂವರು ಅಸ್ವಸ್ಥಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News