×
Ad

ಆಲ್ವಾರ್ ಸಾಮೂಹಿಕ ಅತ್ಯಾಚಾರ ಪ್ರಕರಣ: ಮಾಯಾವತಿಯಿಂದ ರಾಜಸ್ಥಾನದ ಕಾಂಗ್ರೆಸ್ ಸರಕಾರದ ತರಾಟೆ

Update: 2019-05-11 20:33 IST

ಲಕ್ನೋ, ಮೇ, 11: ಆಲ್ವಾರ್ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ನಿಗ್ರಹಿಸುವ ಪ್ರಯತ್ನದ ಕುರಿತು ರಾಜಸ್ಥಾನದ ಕಾಂಗ್ರೆಸ್ ಸರಕಾರವನ್ನು ಬಿಸ್ಪಿ ವರಿಷ್ಠೆ ಮಾಯಾವತಿ ಕಟುವಾಗಿ ಟೀಕಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಯಾವತಿ, ಅಲವರ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತಪ್ಪೆಸಗಿದವರಿಗೆ ಮರಣ ದಂಡನೆ ವಿಧಿಸಬೇಕು ಎಂದು ಆಗ್ರಹಿಸಿದರು.

‘‘ಆಲ್ವಾರ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತಪ್ಪೆಸಗಿದವರನ್ನು ನೇಣಿಗೆ ಹಾಕಬೇಕು. ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ, ಪೊಲೀಸ್ ಹಾಗೂ ಆಡಳಿತದ ವಿರುದ್ಧ ಸುಪ್ರೀಂ ಕೋರ್ಟ್ ಕ್ರಮ ತೆಗೆದುಕೊಳ್ಳಬೇಕು. ಇದು ಕೇವಲ ದಲಿತರಿಗೆ ಸಂಬಂಧಿಸಿದ ವಿಷಯವಲ್ಲ. ಎಲ್ಲ ಮಹಿಳೆಯರಿಗೆ ಸಂಬಂಧಿಸಿದ ವಿಷಯ’’ ಎಂದು ಮಾಯಾವತಿ ಹೇಳಿದ್ದಾರೆ.

 ಎಪ್ರಿಲ್ 26ರಂದು ತನ್ನ ಪತಿಯ ಬೈಕ್‌ನಲ್ಲಿ ಮಹಿಳೆ ಸಂಚರಿಸುತ್ತಿದ್ದ ಸಂದರ್ಭ 6 ಮಂದಿಯ ಗುಂಪು ಅವರನ್ನು ತನಗಝಿ- ಆಲ್ವಾರ್ ನಲ್ಲಿ ಅಡ್ಡಗಟ್ಟಿತು. ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿತ್ತು. ಗುಂಪು ಕೃತ್ಯದ ವೀಡಿಯೊ ಚಿತ್ರೀಕರಣ ಮಾಡಿತ್ತು. ಅಲ್ಲದೆ, ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಒಡ್ಡಿತ್ತು. ಬಳಿಕ ಸ್ಥಳೀಯ ಪೊಲೀಸರು ಎಫ್‌ಐಆರ್ ದಾಖಲಿಸಲು ವಿಳಂಬಿಸಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News