ಹೊಸದಿಲ್ಲಿ: ಎಲ್ಲ 7 ಸ್ಥಾನಗಳಿಗೆ ತ್ರಿಕೋನ ಸ್ಪರ್ಧೆ
ಹೊಸದಿಲ್ಲಿ, ಮೇ 11: ಹೊಸದಿಲ್ಲಿಯಲ್ಲಿ ರವಿವಾರ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಆಪ್ ಹಾಗೂ ಕಾಂಗ್ರೆಸ್ ನಡುವೆ ತ್ರೀಕೋನ ಸ್ಪರ್ಧೆ ನಡೆಯಲಿದೆ.
ಹೊಸದಿಲ್ಲಿ ಲೋಕಸಭಾ ಕ್ಷೇತ್ರದ ಒಟ್ಟು 7 ಸ್ಥಾನಗಳಲ್ಲಿ 164 ಮಂದಿ ಸ್ಪರ್ಧಿಸುತ್ತಿದ್ದಾರೆ. ಇವರಲ್ಲಿ 18 ಮಂದಿ ಮಹಿಳೆಯರು. ಈಶಾನ್ಯ ದಿಲ್ಲಿಯ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ಹೊಸದಿಲ್ಲಿಯ ಬಿಜೆಪಿ ಅಭ್ಯರ್ಥಿ ಮೀನಾಕ್ಷಿ ಲೇಖಿ ಹಾಗೂ ಪೂರ್ವ ದಿಲ್ಲಿಯ ಆಪ್ ಅಭ್ಯರ್ಥಿ ಆತಿಶಿ ಮರ್ಲಿನಾ ಪ್ರಮುಖ ಅಭ್ಯರ್ಥಿಗಳು.
ಇತರ ಪ್ರಮುಖ ಅಭ್ಯರ್ಥಿಗಳೆಂದರೆ, ದಕ್ಷಿಣ ದಿಲ್ಲಿಯ ಅಭ್ಯರ್ಥಿ, ಬಾಕ್ಸರ್ ವಿಜೇಂದ್ರ ಸಿಂಗ್, ಚಾಂದಿನಿ ಚೌಕ್‌ನ ಅಭ್ಯರ್ಥಿ ಕೇಂದ್ರ ಸಚಿವ ಹರ್ಷವರ್ಧನ್ ಹಾಗೂ ಪೂರ್ವ ದಿಲ್ಲಿಯ ಅಭ್ಯರ್ಥಿ ಕ್ರಿಕೆಟಿಗ ಗೌತಮ್ ಗಂಭೀರ್.
ದಿಲ್ಲಿಯ 2,7000 ಸ್ಥಳಗಳಲ್ಲಿ ಒಟ್ಟು 13,819 ಮತಗಟ್ಟೆಗಳಿರಲಿವೆ. 70 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 1 ಮಾದರಿ ಮತಗಟ್ಟೆ ಇರಲಿದೆ. 17 ಮತಗಟ್ಟೆಗಳಲ್ಲಿ ಮಹಿಳೆಯರು ಮಾತ್ರ ಕಾರ್ಯ ನಿರ್ವಹಿಸಲಿದ್ದಾರೆ.