×
Ad

ದಿಲ್ಲಿಯಲ್ಲಿ ಮತ ಚಲಾಯಿಸಿದ ರಾಹುಲ್ ಗಾಂಧಿ

Update: 2019-05-12 11:05 IST

ಹೊಸದಿಲ್ಲಿ, ಮೇ 12: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರವಿವಾರ ದಿಲ್ಲಿಯ ಔರಂಗಾಜೇಬ್ ಲೇನ್‌ನಲ್ಲಿರುವ ಎನ್‌ಪಿ ಸೀನಿಯರ್ ಸೆಕೆಂಡರಿ ಸ್ಕೂಲ್‌ನಲ್ಲಿ ಮತ ಚಲಾಯಿಸಿದರು.

ರಾಹುಲ್ ಉನ್ನತ ಭದ್ರತೆಯಿರುವ ವಾಹನವಿಲ್ಲದೆ ಅಂಗರಕ್ಷಕರೊಂದಿಗೆ ಕೇಂದ್ರ ದಿಲ್ಲಿಯಲ್ಲಿರುವ ತನ್ನ ಮನೆಯಿಂದ ಮತದಾನ ಕೇಂದ್ರಕ್ಕೆ ನಡೆದುಕೊಂಡು ಹೋಗಿ ಮತ ಚಲಾಯಿಸಿದರು.

ರವಿವಾರ ದಿಲ್ಲಿ ಸಹಿತ ದೇಶದ 7 ರಾಜ್ಯಗಳ 59 ಕ್ಷೇತ್ರಗಳಲ್ಲಿ ಆರನೇ ಹಂತದ ಮತದಾನ ನಡೆಯುತ್ತಿದೆ.

 ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ,‘‘ಈ ಬಾರಿಯ ಲೋಕಸಭೆ ಚುನಾವಣೆ ಉತ್ತಮ ಪೈಪೋಟಿಯಿಂದ ಕೂಡಿದೆ. ನರೇಂದ್ರ ಮೋದಿ ದ್ವೇಷ ಹರಡುತ್ತಿದ್ದಾರೆ. ಆದರೆ, ನಾವು ಜನತೆಗೆ ಪ್ರೀತಿ ಹಂಚುತ್ತೇವೆ. ನಿರುದ್ಯೋಗ, ರೈತರ ಬಿಕ್ಕಟ್ಟು, ನೋಟು ನಿಷೇಧ ಹಾಗೂ ಭ್ರಷ್ಟಾಚಾರ ವಿರುದ್ಧ ನಾವು ಹೋರಾಟ ನಡೆಸುತ್ತಿದ್ದು, ನಾವು ಅಧಿಕಾರಕ್ಕೆ ಬಂದರೆ, ಇದೆಲ್ಲವನ್ನೂ ಬಗೆಹರಿಸಲು ಗಮನ ನೀಡುತ್ತೇವೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News